ಕಾಶ್ಮೀರ ಫೈಲ್ಸ್ ಸಿನಿಮಾಕ್ಕೂ ಜೇಮ್ಸ್ಗೂ ಸಂಬAಧ ಇಲ್ಲ ಎಂದು ನಟ ಶಿವರಾಜ್ಕುಮಾರ್ ಹೇಳಿದ್ದಾರೆ. `ಬುಕ್ ಮೈ ಶೋದಲ್ಲಿ ನೋಡಿದ್ರೆ ನಿಮಗೆ ಗೊತ್ತಾಗುತ್ತೆ. ಮೀಡಿಯಾದವರು ನಿಮ್ಮ ಎಲ್ಲ ಗೊತ್ತಿರುತ್ತೆ. ನೀವು ಬುಕ್ ಶೋ ನೋಡಿ ಆಮೇಲೆ ನೀವು ಜನರಿಗೆ ಹೇಳಿ. ಯಾವ ಸಿನಿಮಾದಿಂದ ತೊಂದರೆ ಆಗಿದೆ ಎಂದು ಬುಕ್ ಮೈ ಶೋ ನೋಡಿದ್ರೆ ಗೊತ್ತಾಗುತ್ತೆ’ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ಬಳಿಕ ನಟ ಶಿವಣ್ಣ ಗರಂ ಆಗಿ ಹೇಳಿದರು.
ಈ ಮೂಲಕ ಜೇಮ್ಸ್ ಸಿನಿಮಾ ತೆಗೆದು ಕಾಶ್ಮೀರಿ ಫೈಲ್ಸ್ ಸಿನಿಮಾ ಪ್ರದರ್ಶನ ಮಾಡುವಂತೆ ಬಿಜೆಪಿ ಶಾಸಕರು ಒತ್ತಡ ಹೇರುತ್ತಿದ್ದಾರೆ ಮಾಜಿ ಸಿಎಂ ಸಿದ್ದರಾಮಮಯ್ಯ ಮಾಡಿದ್ದ ಆರೋಪವನ್ನು ನಿರಾಕರಿಸಿದ್ದಾರೆ.
ಜೇಮ್ಸ್ ಸಿನಿಮಾಕ್ಕೆ ತೊಂದರೆ ಆಗುತ್ತಿರುವ ಬಗ್ಗೆ ನಿರ್ದೇಶಕ ಚೇತನ್ ಸಿದ್ದರಾಮಯ್ಯರನ್ನು ಭೇಟಿ ಆಗಿ ದೂರು ನೀಡಿದ್ದರು.
`ಥಿಯೇಟರ್ ಸಮಸ್ಯೆ ಬರ್ತಾನೆ ಇರುತ್ತೆ, ಹೋಗ್ತಾನೆ ಇರುತ್ತೆ, ಇದಕ್ಕೆ ಏನೂ ಮಾಡಕ್ಕಾಗಲ್ಲ. ಇದರ ತಪ್ಪನ್ನು ಯಾರ ಮೇಲು ಹಾಕಕ್ಕಾಗಲ್ಲ. ಅಪ್ಪು ಸಿನಿಮಾ ರಿಲೀಸ್ ಆಗಿರುವುದು ಭಾವನಾತ್ಮಕ ಸಂಬAಧ. ನಾವು ಯಾವತ್ತೂ ಬಿಟ್ಟು ಕೊಡುವುದಕ್ಕೆ ಸಿದ್ಧರಿಲಿಲ್ಲ. ನಿನ್ನೆ ಮುಖ್ಯಮಂತ್ರಿಗಳು ಮೂರು ಬಾರಿ ಕರೆ ವಿಚಾರಿಸಿದ್ದಾರೆ. ಇವತ್ತು ಬೆಳಗ್ಗೆ ಸಿಎಂರನ್ನು ಭೇಟಿ ಆಗಿದ್ದೇನೆ’ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.