ವರನಟ ಡಾ.ರಾಜ್ಕುಮಾರ್ ಕುಟುಂಬದಿಂದ ಮತ್ತೊಬ್ಬ ಸದಸ್ಯರು ಸಿನಿಮಾ ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ನಟ ಡಾ.ಶಿವರಾಜ್ಕುಮಾರ್ ಅವರ ಪುತ್ರಿ ನಿವೇದಿತಾ ರಾಜ್ಕುಮಾರ್ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿಯಾಗಿದ್ದು, ಹೊಸ ಪ್ರತಿಭೆಗಳಿಗೆ ಸಾಥ್ ಕೊಟ್ಟಿದ್ದಾರೆ.
ಕನ್ನಡದಲ್ಲಿ ಕಮರ್ಷಿಯಲ್ ಸಿನಿಮಾಗಳ ನಡುವೆ ಮೌಲ್ಯಾಧಾರಿತ ಚಿತ್ರಗಳು ಕೂಡ ಸದ್ದು ಮಾಡುತ್ತಿವೆ. ಇದರ ಜೊತೆಗೆ ಕಮರ್ಷಿಯಲ್ ಕಥೆ ಹೇಳುವಂಥ ವೆಬ್ ಸೀರಿಸ್ಗಳಿಗೆ ಯಾವುದೇ ಕೊರತೆ ಇಲ್ಲ ಅನ್ನೋದನ್ನ ತೋರಿಸೋದಕ್ಕೆ ಎಂಟ್ರಿಕೊಡುತ್ತಿದೆ ‘ಹನಿಮೂನ್’ ಕಹಾನಿ.
ವೀಕ್ಷಕರನ್ನು ಮತ್ತೆ ರಂಜಿಸಲು ವೆಬ್ ಸೀರಿಸ್ ಮೂಲಕ ಅಟೆಂಡೆನ್ಸ್ ಹಾಕುತ್ತಿದ್ದಾರೆ ನಾಗಭೂಷಣ್. ಓಟಿಟಿ ಮೂಲಕ ‘ಹನಿಮೂನ್’ ಕಥೆ ಹೇಳಲು ನಾಗಭೂಷಣ್ & ಟೀಂ ಸಜ್ಜಾಗಿದ್ದು, ಮತ್ತೆ ಕನ್ನಡ ಪ್ರೇಕ್ಷಕರು ನಗೆಗಡಲಲ್ಲಿ ತೆಲೋದು ಗ್ಯಾರಂಟಿ. ನಟ ಡಾ. ಶಿವರಾಜ್ಕುಮಾರ್ ಅವರ ಪುತ್ರಿ ಈ ವೆಬ್ ಸೀರಿಸ್ ಮೂಲಕ ಚಿತ್ರರಂಗದ ನಿರ್ಮಾಣ ಕ್ಷೇತ್ರಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
‘ಹನಿಮೂನ್’ ವೆಬ್ ಸೀರಿಸ್ ಲಾಂಚ್ಗೆ ರೆಡಿಯಾಗಿರುವ ಹೊತ್ತಲ್ಲೇ, ದೊಡ್ಡ ಕಾರ್ಯಕ್ರಮ ಮಾಡಿದೆ. ಕಾರ್ಯಕ್ರಮಕ್ಕೆ ನಟ ಶಿವಣ್ಣ ಸಾಥ್ ನೀಡಿದ್ದರು. ಈ ಮೂಲಕ ಪುತ್ರಿಯ ಹೊಸ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ.
ಇನ್ನು ಈಗಾಗಲೇ ಹಲವು ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ನಟಿಸಿ, ಕನ್ನಡಿಗರ ಮನಗೆದ್ದಿರುವ ನಾಗಭೂಷಣ್, ಜನರ ಮನಸ್ಸಿಗೆ ಈ ವೆಬ್ ಸೀರಿಸ್ ಮೂಲಕ ಮತ್ತಷ್ಟು ಹತ್ತಿರವಾಗಲಿದ್ದಾರಂತೆ.’ಹನಿಮೂನ್’ ಅನ್ನೋ ಟೈಟಲ್ ಜೊತೆಗೆ ಸಂಸಾರದ ಪಾಠ ಹೇಳಲಿದ್ದಾರೆ ನಾಗಭೂಷಣ್. ಇನ್ನು ನಟ ನಾಗಭೂಷಣ್ಗೆ ಜೋಡಿಯಾಗಿ ಸಂಜನಾ ಆನಂದ್ ಸಾಥ್ ನೀಡಿದ್ದು, ಹೊಸ ಮದುವೆಯಾದ ಹುಡುಗನಿಗೆ ದಾರಿ ತೋರಿಸಲು ಲೂಸಿಯಾ ಪವನ್ ಎಂಟ್ರಿ ಕೊಡಲಿದ್ದಾರೆ.