ಕಾಂಗ್ರೆಸ್ ಬಿಟ್ಟು ತಮ್ಮದೇ ಹೊಸ ಪಕ್ಷ ಸ್ಥಾಪಿಸಿದ್ದ ಮಾಜಿ ರಾಜ್ಯಸಭಾ ಸಂಸದ ಗುಲಾಂ ನಬಿ ಆಜಾದ್ಗೆ ಆಘಾತವಾಗಿದೆ.
ಆಜಾದ್ ಅವರ ಪಕ್ಷ ಪ್ರಜಾಸತಾತ್ಮಕ ಪ್ರಗತಿಪರ ಆಜಾದ್ ಪಕ್ಷ (DPAP) ಪಕ್ಷಕ್ಕೆ ರಾಜೀನಾಮೆ ನೀಡಿ ಹಲವು ನಾಯಕರು ಮತ್ತೆ ಕಾಂಗ್ರೆಸ್ಗೆ ಮರಳಿದ್ದಾರೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮತ್ತು ಜಮ್ಮು-ಕಾಶ್ಮೀರ ಕಾಂಗ್ರೆಸ್ ಉಸ್ತುವಾರಿ ರಜಿನಿ ಪಾಟೀಲ್ ಮತ್ತು ರಾಜ್ಯಾಧ್ಯಕ್ಷ ವಿಕಾರ್ ವಸೂಲ್ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಮರು ಸೇರ್ಪಡೆಯಾಗಿದ್ದಾರೆ.
ಮಾಜಿ ಸಚಿವ, ಎರಡು ಬಾರಿ ಶಾಸಕ ಯಶ್ಪಾಲ್ ಕುಂಡಲ್ ಮತ್ತೆ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಜಮ್ಮು-ಕಾಶ್ಮೀರ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದ ಹಾಜಿ ಅಬ್ದುಲ್ ರಶೀದ್ ದಾರ್ ಕೂಡಾ ಕಾಂಗ್ರೆಸ್ಗೆ ಮರಳಿದ್ದಾರೆ.
ಕಾಂಗ್ರೆಸ್ಗೆ ಮರಳಿದರ 23 ನಾಯಕರಲ್ಲಿ ಆಜಾದ್ ಪಕ್ಷದವರು ಮತ್ತು ಆಮ್ ಆದ್ಮಿ ಪಕ್ಷದವರೂ ಸೇರಿದ್ದಾರೆ.
ನರೇಶ್ ಗುಪ್ತಾ, ಶಾಮ್ ಲಾಲ್ ಭಗತ್, ನಮ್ರತಾ ಶರ್ಮಾ, ಸೈಮಾ ಜಾನ್, ಶಹಾಜೆಹಾನ್ ದಾರ್, ಫಾರೂಕ್ ಅಹ್ಮದ್, ತರನ್ಜಿತ್ ಸಿಂಗ್ ತೋನಿ, ಗಜನ್ಫರ್ ಅಲಿ, ಸಂತೋಷ್ ಮಜೋತ್ರಾ, ರಜನಿ ಶರ್ಮಾ, ನಿರ್ಮಲ್ ಸಿಂಗ್ ಮೆಹ್ತಾ, ಮದನ್ ಲಾಲ್ ಚಲೋಟ್ರಾ, ಹಮಿತ್ ಸಿಂಗ್ ಬಟ್ಟಿ, ರಮೇಶ್ ಪನ್ಡೋಟ್ರಾ, ವೈದ್ ರಾಜ್ ಶರ್ಮಾ, ಮನ್ದೀಪ್ ಚೌಧರಿ, ನಜೀರ್ ಅಹ್ಮದ್ ಔಕಾದ್, ಮಹೇಶ್ವರ್ ವಿಶ್ವಕರ್ಮ ಮತ್ತು ಜುಂಗ್ ಬಹದೂರ್ ಶರ್ಮಾ ಮತ್ತೆ ಕಾಂಗ್ರೆಸ್ಗೆ ಸೇರ್ಪಡೆ ಆಗಿದ್ದಾರೆ.
ADVERTISEMENT
ADVERTISEMENT