ಬುಧವಾರದಂದು ಜೈನ ಧರ್ಮ ಬಳಗವು ಆನ್ಲೈನ್ ಮಾಧ್ಯಮದ ಕಾರ್ಯಕ್ರಮದ ಮೂಲಕ ಅಗಲಿದ ಚೇತನ ಉಜಿರೆಯ ಡಾ. ಬಿ. ಯಶೋವರ್ಮ ಅವರಿಗೆ ಶೃದ್ಧಾಂಜಲಿ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಆಶೀರ್ವಚನವನ್ನು ದಯಪಾಲಿಸಿದ ಪ.ಪೂ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಜೈನ ಮಠ ಮೂಡುಬಿದಿರೆ ಡಾ. ಬಿ ಯಶೋವರ್ಮ ಅವರ ಆದರ್ಶಗಳನ್ನು ನಾವು ಪಾಲಿಸುವುದೇ ನಾವು ನಿಜವಾದ ಶೃದ್ಧಾಂಜಲಿ ಅರ್ಪಿಸಿದಂತೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ಜೈನ್ ಮಿಲನ್ ವಲಯ 8 ರ ಅಧ್ಯಕ್ಷರಾದ ಶ್ರೀ ಪುಷ್ಪರಾಜ್ ಜೈನ್ ಮಂಗಳೂರು ಇವರು ಮಾತನಾಡುತ್ತಾ ಡಾ. ಬಿ ಯಶೋವರ್ಮ ಅವರ ಸರಳತೆ, ಆಡಳಿತ ದಕ್ಷತೆ, ಸಂಘಟನಾ ಶಕ್ತಿ ಅನುಪಮವಾದದ್ದು ಹಾಗೂ ಅವರ ನಿಧನ ತುಂಬಲಾರದ ನಷ್ಟವಾಗಿದೆ ಎಂದರು.
ಖ್ಯಾತ ಹಿರಿಯ ಸಾಹಿತಿಗಳಾದ ನಾಡೋಜ ಹಂಪ ನಾಗರಾಜಯ್ಯ, ಎಸ್ ಡಿ ಎಂ ಕಾಲೇಜಿನ ಕುಲಸಚಿವ ( ಆಡಳಿತ ) ಪ್ರೊ. ಬಿ. ಪಿ ಸಂಪತ್ ಕುಮಾರ್ , ಬೆಷ್ಟ್ ಫೌಂಡೇಶನ್ ಬೆಳ್ತಂಗಡಿ ಇದರ ಅಧ್ಯಕ್ಷ ರಕ್ಷಿತ್ ಶಿವರಾಮ್, ಡಾ. ಎಚ್ ಪಿ ಮೋಹನ್ ಕುಮಾರ್ ಶಾಸ್ತ್ರೀ, ಐ ಪಿ ಎಸ್ ಅಧಿಕಾರಿ ಜಿನೇಂದ್ರ ಕಣಗಾವಿ, ಶ್ರೀ ಸೋಮಶೇಖರ್ ಶೆಟ್ಟಿ ಉಜಿರೆ, ಮತ್ತಿತರ ಗಣ್ಯರು ಮರೆಯಲಾಗದ ಚೇತನ ಡಾ. ಬಿ ಯಶೋವರ್ಮ ಅವರಿಗೆ ನುಡಿ ನಮನ ಸಲ್ಲಿಸಿದರು. ಡಾ. ಬಿ ಯಶೋವರ್ಮ ಅವರ ಕರ್ತೃತ್ವ ಶಕ್ತಿ, ಆಡಳಿತ ದಕ್ಷತೆ, ಅವರಲ್ಲಿದ್ದ ಶಿಸ್ತು, ವಿನಯತೆ, ಸ್ನೇಹ ಭಾವಗಳ ಕುರಿತು ಅತಿಥಿಗಳು ಗುಣಗಾನ ಮಾಡಿದರು.
ನಿರಂಜನ್ ಜೈನ್ ಕುದ್ಯಾಡಿ ಕಾರ್ಯಕ್ರಮ ನಿರ್ವಹಣೆಗೈದರು. ನಿರೀಕ್ಷಾ ಜೈನ್ ಹೊಸ್ಮಾರ್ ಮಂಗಲಾಚರಣೆ ಹಾಡಿದರು. ಮಾಳ ಹರ್ಷೇಂದ್ರ ಜೈನ್ ಸ್ವಾಗತಿಸಿ ಪ್ರಾಸ್ತಾವನೆಗೈದರು. ಧೀರಜ್ ಜೈನ್ ಹೊಳೆನರಸೀಪುರ ಣಮೋಕಾರ ಮಂತ್ರ ಹಾಗೂ ಶಾಂತಿ ಮಂತ್ರ ಪಠಿಸಿದರು. ವಜ್ರಕುಮಾರ್ ಜೈನ್ ತಾಂತ್ರಿಕ ವಿಭಾಗದಲ್ಲಿ ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ಪ್ರೊ. ಎಸ್ ಡಿ ಶೆಟ್ಟಿ ಉಜಿರೆ, ಡಾ. ಜಯಕೀರ್ತಿ ಜೈನ್ ಧರ್ಮಸ್ಥಳ, ಎನ್ ಜಯಮಾಲ ಉಜಿರೆ, ದಿನೇಶ್ ಚೌಟ ಉಜಿರೆ, ಧರಣೇಂದ್ರ ಕುಮಾರ್ ಶಿಕ್ಷಕರು ಗುರುವಾಯನಕೆರೆ, ಪಣಿರಾಜ್ ಜೈನ್ ಐಟಿಐ, ಎಸ್ ಡಿ ಎಮ್ ಆಸ್ಪತ್ರೆಯ ಆ್ಯಂಬುಲೆನ್ಸ್ ಚಾಲಕ ದಿವಾಕರ್, ಚಿತ್ತಾ ಜಿನೇಂದ್ರ, ಮಹಾವೀರ್ ಪ್ರಸಾದ್ ಹೊರನಾಡು, ಅರ್ಚಿತ್ ಜೈನ್ ಸಂಸೆ, ಸುದೇಶ್ ಜೈನ್ ಮಕ್ಕಿಮನೆ, ಅಕ್ಷಯ್ ಜೈನ್ ಕೆರ್ವಾಶೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
– ನಿರಂಜನ್ ಜೈನ್ ಕುದ್ಯಾಡಿ