ಕಾರ್ಕಳ ಜೈನಮಠದ ಪ್ರವೇಶೋತ್ಸವದ 48 ದಿನಗಳ ನಂತರದ ಮಂಡಲ ಪೂಜೆ ಮತ್ತು ಆರಾಧನಾ ಪೂಜೆಯ ಬಳಿಕ ಶ್ರೀ ಜೈನಮಠದ ಧಾರ್ಮಿಕ ಸಭೆಯಲ್ಲಿ ಕೆ. ವರ್ಧಮಾನ್ ಜೈನ್ ಮಾರ್ನಾಡು ವಿರಚಿತ ಕಾರ್ಕಳ ಶ್ರೀ ಜೈನ ಮಠ ಮತ್ತು ಜೈನ ಶಾಸನ ಎಂಬ ಕೃತಿಯ ಲೋಕಾರ್ಪಣೆ ನಡೆಯಿತು.
ಕಾರ್ಕಳದ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಜಿ ಮತ್ತು ಶ್ರೀ ಕ್ಷೇತ್ರ ಹೊಂಬುಜ ಕ್ಷೇತ್ರ ಜೈನಮಠದ ಗುರು ಡಾ. ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ ಪಾವನ ಸಾನಿಧ್ಯ ವಹಿಸಿದ್ದರು.