ಬಾಲಿವುಡ್ ನಟ ಶ್ರೇಯಸ್ ತಲ್ಪಾಡೆಗ(47)ಗೆ ಹೃದಯಾಘಾತವಾಗಿದೆ. ಮುಂಬೈನಲ್ಲಿ ಶೂಟಿಂಗ್ ಮುಗಿಸಿ ಮನೆಗೆ ಬಂದಾಗ ತೀವ್ರ ಎದೆ ನೋವು ಕಾಣಿಸಿಕೊಂಡು ನಟ ಶ್ರೇಯಸ್ ಅಸ್ವಸ್ಥರಾಗಿದ್ದರು.
ಕೂಡಲೇ ನಟ ಪತ್ನಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ರು. ಪರಿಶೀಲನೆ ನಡೆಸಿದ ವೈದ್ಯರು ನಟನಿಗೆ ಹೃದಯಾಘಾತವಾಗಿರೋದನ್ನ ಖಚಿತಪಡಿಸಿದ್ದಾರೆ. ಅಲ್ಲದೆ ಕೂಡಲೇ ಆಂಜಿಯೋಪ್ಲಾಸ್ಟಿ ನಡೆಸಿದ್ದಾರೆ.
ವರದಿಗಳ ಪ್ರಕಾರ ನಿನ್ನೆ ನಟ ಶ್ರೇಯಸ್ ಆಕ್ಷನ್ ಸೀನ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು, ದೇಹಕ್ಕೆ ಹೆಚ್ಚು ಒತ್ತಡವಾದ್ದರಿಂದ ಈ ಸಮಸ್ಯೆ ಕಾಣಿಸಿಕೊಂಡಿದೆ ಎನ್ನಲಾಗಿದೆ.
ಸದ್ಯ ನಟ ಶ್ರೇಯಸ್ ಆರೋಗ್ಯದಿಂದಿದ್ದು ವೈದ್ಯರು ಕೆಲ ತಿಂಗಳುಗಳ ಕಾಲ ವಿಶ್ರಾಂತಿ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.