ADVERTISEMENT
ಗುಜರಾತ್ ಟೈಟನ್ಸ್ ಆಟಗಾರ ಶುಭ್ಮನ್ ಗಿಲ್ ಒಂದೇ ದಿನ 6 ದಾಖಲೆ ಸೃಷ್ಟಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಗಿಲ್ ಶತಕ ಬಾರಿಸಿದ್ದಾರೆ. ಈ ಐಪಿಎಲ್ ಆವೃತ್ತಿಯಲ್ಲಿ ಗಿಲ್ ಗಳಿಸಿದ ಮೂರನೇ ಶತಕ ಇದು.
ಶುಕ್ರವಾರ ಅಹಮದಾಬಾದ್ನಲ್ಲಿ ನಡೆದ ಎಲಿಮಿನೇಟರ್ ಪಂದ್ಯದಲ್ಲಿ 60 ಎಸೆತಗಳಲ್ಲಿ ಗಿಲ್ 129 ರನ್ ಗಳಿಸಿದ್ದಾರೆ.
ಒಂದೇ ದಿನ ಗಿಲ್ ಸೃಷ್ಟಿಸಿದ 6 ದಾಖಲೆಗಳು:
1. 129 ರನ್ ಗಳಿಸುವ ಮೂಲಕ ಪ್ಲೇ ಆಫ್ ಪಂದ್ಯದಲ್ಲಿ ಅತೀ ಹೆಚ್ಚು ರನ್ ಗಳಿಸಿದ ಎಂಬ ಹೆಗ್ಗಳಿಕೆ. 2014ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಸಿಎಸ್ಕೆ ನಡುವಿನ ಪ್ಲೇ ಆಫ್ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಅವರು 122 ರನ್ ಗಳಿಸಿದ್ದರು. ಈ ಮೂಲಕ ಗಿಲ್ ಸೆಹ್ವಾಗ್ ದಾಖಲೆ ಮುರಿದಿದ್ದಾರೆ.
2. ಐಪಿಎಲ್ ಸರಣಿಯಲ್ಲೇ ಗಿಲ್ 2ನೇ ಅತ್ಯಧಿಕ ರನ್ ಗಳಿಸಿದ ಆಟಗಾರ. 2020ರಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಆರ್ಸಿಬಿ ನಡುವಿನ ಪಂದ್ಯದಲ್ಲಿ ಕೆ ಎಲ್ ರಾಹುಲ್ 132 ರನ್ ಗಳಿಸಿದ್ದರು.
3. ನಿನ್ನೆ ನಡೆದ ಪಂದ್ಯದಲ್ಲಿ ಗಿಲ್ ಅವರು 10 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ಪಂದ್ಯದಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಮುರಿದಿದ್ದಾರೆ. ವೃದ್ಧಿಮಾನ್ ಸಾಹಾ, ಕ್ರಿಸ್ಗೇಲ್, ವೀರೇಂದ್ರ ಸೆಹ್ವಾಗ್, ಶ್ಯಾನ್ ವ್ಯಾಟ್ಸನ್ ಒಂದೇ ಪಂದ್ಯದಲ್ಲಿ ತಲಾ 8 ಸಿಕ್ಸರ್ ಬಾರಿಸಿದ ದಾಖಲೆ ಹೊಂದಿದ್ದರು.
4. ಗಿಲ್ ಮತ್ತು ಸಾಯಿ ಸುದರ್ಶನ್ ನಡುವಿನ 138 ರನ್ಗಳ ಜೊತೆಯಾದ ಐಪಿಎಲ್ ಪ್ಲೇ ಆಫ್ನಲ್ಲೇ ಮೂರನೇ ಅತ್ಯಧಿಕ ಜೊತೆಯಾಟವಾಗಿದೆ.
5. ಐಪಿಎಲ್ ಸೀಸನ್ವೊಂದರಲ್ಲಿ ಅತ್ಯಧಿಕ ರನ್ ಗಳಿಸಿರುವ ಮೂರನೇ ಆಟಗಾರ ಗಿಲ್. ಐಪಿಎಲ್ನಲ್ಲಿ ಗಿಲ್ 851 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 2016ರ ಸೀಸನ್ನಲ್ಲಿ 973 ರನ್ ಮತ್ತು ಜಾಸ್ ಬಟ್ಲರ್ 2022ರ ಸೀಸನ್ನಲ್ಲಿ 863 ರನ್ ಗಳಿಸಿದ್ದರು.
6. ಗಿಲ್ ಶತಕದ ಕಾರಣದಿಂದ ಗುಜರಾತ್ ಟೈಟನ್ಸ್ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 233 ರನ್ ಗಳಿಸಿತು. ಇದು ಐಪಿಎಲ್ ಪ್ಲೇ ಆಫ್ ಇತಿಹಾಸದಲ್ಲಿ ಅತ್ಯಧಿಕ ಸ್ಕೋರ್.
ADVERTISEMENT