ಏಕದಿನ ವಿಶ್ವಕಪ್ ಆರಂಭದ ದಿನವೇ ಭಾರತಕ್ಕೆ ಆಘಾತ. ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಅವರಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ.
ಈ ಹಿನ್ನೆಲೆಯಲ್ಲಿ ಚೆನ್ನೈನಲ್ಲಿ ಭಾರತ ಆಡಲಿರುವ ಮೊದಲ ಪಂದ್ಯಕ್ಕೆ ಗಿಲ್ ಅವರು ಅಲಭ್ಯರಾಗುವ ಸಾಧ್ಯತೆ ಇದೆ. ಭಾನುವಾರ ಆಸ್ಟ್ರೇಲಿಯಾ ವಿರುದ್ಧ ಭಾರತ ತನ್ನ ಮೊದಲ ವಿಶ್ವಕಪ್ ಪಂದ್ಯವನ್ನು ಆಡಲಿದೆ.
ಇವತ್ತು ಮತ್ತೊಂದು ಬಾರಿ ಡೆಂಗ್ಯೂ ಪರೀಕ್ಷೆಯ ಬಳಿಕ ಗಿಲ್ ಅವರ ಅಲಭ್ಯತೆಯ ಬಗ್ಗೆ ನಿರ್ಧಾರ ಮಾಡಲಾಗುತ್ತದೆ.
ಒಂದು ವೇಳೆ ಗಿಲ್ ಅವರು ಅಲಭ್ಯರಾದರೆ ಆಗ ಕೆ ಎಲ್ ರಾಹುಲ್ ಅಥವಾ ಇಶಾನ್ ಕಿಸಾನ್ ಅವರು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸುವ ನಿರೀಕ್ಷೆ ಇದೆ.
ADVERTISEMENT
ADVERTISEMENT