ಉಳ್ಳವರು ಔದಾರ್ಯದಿಂದ ಐದೂ ಗ್ಯಾರಂಟಿ ಯೋಜನೆಗಳ ಲಾಭವನ್ನು ಬಿಟ್ಟುಕೊಟ್ಟರೆ ಅರ್ಥಿಕ ಹೊರೆ ತಗ್ಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಪ್ರಮುಖ ದೈನಿಕ ಪ್ರಜಾವಾಣಿಗೆ ಬರೆದಿರುವ ಲೇಖನದಲ್ಲಿ ಸಿದ್ದರಾಮಯ್ಯ ಅವರು ಮನವಿ ಮಾಡಿದ್ದಾರೆ.
ಐದು ಗ್ಯಾರಂಟಿ ಯೋಜನೆಗಳನ್ನು ಜಾತಿ-ಧರ್ಮ-ವರ್ಗ ನೋಡದೆ ಜಾರಿಗೊಳಿಸಿದ್ದೇವೆ. ಈ ಯೋಜನೆಗಳು ಅರ್ಹ ಫಲಾನುಭವಿಗಳ ಕೈ ಸೇರಬೇಕು. ಅನರ್ಹರು ಅದನ್ನು ಕಸಿದುಕೊಳ್ಳಬಾರದು. ಉಳ್ಳವರು ಔದಾರ್ಯದಿಂದ ಇಲ್ಲದವರಿಗೆ ಬಿಟ್ಟುಕೊಟ್ಟರೆ ಸರ್ಕಾರದ ಮೇಲಿನ ಆರ್ಥಿಕ ಹೊರೆ ಸ್ವಲ್ಪ ಮಟ್ಟಿಗೆ ತಗ್ಗಿ ಉಳಿಕೆಯಾಗುವ ಸಂಪನ್ಮೂಲವನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಇಂತಹದ್ದೊಂದು ಸದಾಶಯವನ್ನು ನಾಡ ಬಾಂಧವರಿಂದ ನಿರೀಕ್ಷಿಸುವುದು ತಪ್ಪಾಗಲಿಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ
ಎಂದು ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.
ಹಲವು ಸರ್ಕಾರಿ ಅಧಿಕಾರಿಗಳು, ಮಾಧ್ಯಮಗಳ ಮುಖ್ಯಸ್ಥರು ಮತ್ತು ಖಾಸಗಿ ವಲಯದಲ್ಲಿರುವ ಹಲವರು ನನಗೆ ಪತ್ರವನ್ನು ಪಡೆದು ತಾವು ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲ್ಲ ಎಂದು ತಿಳಿಸಿದ್ದಾರೆ. ಯಾರಿಗಾದರೂ ಈ ಯೋಜನೆ ಲಾಭದಿಂದ ಹೊರಗಿರಬೇಕು ಎಂದು ಅನ್ನಿಸಿದರೆ ಅವರಿಗೆ ಅವಕಾಶ ನೀಡಲಾಗುವುದು. ಕೇಂದ್ರ ಸರ್ಕಾರದ ಅಡುಗೆ ಅನಿಲದ ಸಬ್ಸಿಡಿ ಲಾಭ ಬಿಡುವಂತೆ ಕೇಳಿದಾಗ ಹಲವರು ಸಬ್ಸಿಡಿ ಲಾಭ ಬಿಟ್ಟಿದ್ದರು. ಇಲ್ಲೂ ಅದೇ ರೀತಿ ಗ್ಯಾರಂಟಿಗಳನ್ನು ಬಿಡಬಹುದು
ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ADVERTISEMENT
ADVERTISEMENT