ಕರ್ನಾಟಕದಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು..? ಜನಾಭಿಪ್ರಾಯ ಯಾರ ಕಡೆಗಿದೆ..? ಕರ್ನಾಟಕದ ಜನ ಯಾರನ್ನು ಮುಖ್ಯಮಂತ್ರಿಯನ್ನಾಗಿ ಕಾಣಲು ಬಯಸುತ್ತಿದ್ದಾರೆ..?
ನಾವು ನಡೆಸಿರುವ ಜನಮತ ಸಮೀಕ್ಷೆಯಲ್ಲಿ 9 ಸಾವಿರಕ್ಕೂ ಅಧಿಕ ಮಂದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಈ 9 ಸಾವಿರ ಮಂದಿಯಲ್ಲಿ ಶೇಕಡಾ 80ರಷ್ಟು ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶೇಕಡಾ 80ರಷ್ಟು ಮಂದಿ ಸಿದ್ದರಾಮಯ್ಯ ಅವರೇ ಮತ್ತೆ ಸಿಎಂ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಲಿ ಎಂದು ಕೇವಲ ಶೇಕಡಾ 12 ಮಂದಿಯಷ್ಟೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶೇಕಡಾ 3ರಷ್ಟು ಮಂದಿ ಎಂಬಿ ಪಾಟೀಲ್ ಪರವೂ, ಶೇಕಡಾ 3ರಷ್ಟು ಮಂದಿ ಸತೀಶ್ ಜಾರಕಿಹೊಳಿ ಪರವೂ, ಶೇಕಡಾ 3ರಷ್ಟು ಮಂದಿ ಮಲ್ಲಿಕಾರ್ಜುನ ಖರ್ಗೆ ಅವರ ಪರವೂ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಸಮೀಕ್ಷೆ:
ಪ್ರಜಾವಾಣಿ ನಡೆಸಿರುವ ಸಮೀಕ್ಷೆಯಲ್ಲಿ 32 ಸಾವಿರ ಮಂದಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಇವರಲ್ಲಿ ಶೇಕಡಾ 68ರಷ್ಟು ಮಂದಿ ಸಿದ್ದರಾಮಯ್ಯ ಅವರೇ ಮತ್ತೆ ಸಿಎಂ ಆಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶೇಕಡಾ 19ರಷ್ಟು ಮಂದಿ ಡಿಕೆಶಿವಕುಮಾರ್ ಅವರ ಪರವೂ, ಶೇಕಡಾ 5ರಷ್ಟು ಮಂದಿ ಡಾ ಜಿ ಪರಮೇಶ್ವರ್ ಅವರ ಪರವೂ, ಶೇಕಡಾ 4ರಷ್ಟು ಮಂದಿ ಎಂ ಬಿ ಪಾಟೀಲ್ ಪರವೂ, ಶೇಕಡಾ 3ರಷ್ಟು ಮಂದಿ ಇತರೆ ಯಾರಾದರೂ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಟಿವಿ9 ಸಮೀಕ್ಷೆ:
ಟಿವಿ9 ಕನ್ನಡ ನಡೆಸಿರುವ ತನ್ನ ಅನ್ಲೈನ್ ಸಮೀಕ್ಷೆಯಲ್ಲಿ 3 ಲಕ್ಷದ 15 ಸಾವಿರಕ್ಕೂ ಅಧಿಕ ಮಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇವರಲ್ಲಿ ಶೇಕಡಾ 74 ಮಂದಿ ಸಿದ್ದರಾಮಯ್ಯ ಅವರೇ ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇವಲ ಶೇಕಡಾ 26 ಮಂದಿಯಷ್ಟೇ ಡಿಕೆಶಿವಕುಮಾರ್ ಮುಖ್ಯಮಂತ್ರಿ ಆಗಲಿ ಎಂದು ಬಯಸಿದ್ದಾರೆ.
ADVERTISEMENT
ADVERTISEMENT