ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.. ಅವರೇ ನಿನ್ನೆಯ ಕಲಾಪದಲ್ಲಿ ಹೇಳಿಕೊಂಡಂತೆ ಅವರ ವಯಸ್ಸು 75.. ಆದರೆ, ನಂಗೆ ಅಷ್ಟೇನು ಅನಿಸಲ್ಲ ಎಂದು ಕೂಡಾ ಹೇಳಿದ್ದರು. ಸದನ ಮುಗಿಸಿ ಸಂಜೆ ಸ್ವಗ್ರಾಮ ಸಿದ್ದರಾಮನ ಹುಂಡಿಗೆ ತೆರಳಿದ ಅವರು,ಗ್ರಾಮದ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು.
ಅದೇನು ಜೋಶ್ ಬಂತು ಗೊತ್ತಿಲ್ಲ. ಸಿದ್ದರಾಮಯ್ಯನವರು ಬಹುವರ್ಷಗಳ ಮೈಚಳಿ ಬಿಟ್ಟು, ತನಗೆ ವಯಸ್ಸಾಗಿದೆ ಎಂಬುದನ್ನು ಮರೆತು ಗ್ರಾಮದ ಗೆಳೆಯರ ಜೊತೆ ಸಕ್ಕತ್ ಸ್ಟೆಪ್ ಹಾಕಿದ್ದಾರೆ.
ಸುಮಾರು 40 ನಿಮಿಷಗಳ ಕಾಲ ವೀರ ಕುಣಿತ ಮಾಡಿದ್ದರೆ. ಜನಪದ ವಾದ್ಯಗಳ ಹಿಮ್ಮೆಳಕ್ಕೆ ತಕ್ಕ ಹೆಜ್ಜೆ ಹಾಕಿದ ಸಿದ್ದರಾಮಯ್ಯ ಎಲ್ಲರ ಗಮನ ಸೆಳೆದಿದ್ದಾರೆ.
ಸಿದ್ದರಾಮಯ್ಯನವರು ಸುಮಾರು 15 ವರ್ಷಗಳ ಬಳಿಕ ಗ್ರಾಮದ ಜಾತ್ರೆಯಲಿ ಕುಣಿದು ಕುಪ್ಪಳಿಸಿದ್ದಾರೆ.
ಸಿದ್ದರಾಮಯ್ಯ ಈ ಹಿಂದೆ ವಿರೋಧ ಪಕ್ಷದ ನಾಯಕ ಅದ ಕಾಲದಲ್ಲಿ ಬಳ್ಳಾರಿಗೆ ಪಾದಯಾತ್ರೆ ಹೋಗಿದ್ದ ಸಂದರ್ಭದಲ್ಲಿ ಕುಣಿದಿದ್ದರು. ಆದರೂ ಆ ಕುಣಿತ ನಿನ್ನೆಯಂತೆ ಇರಲಿಲ್ಲ.
ನೆಚ್ಚಿನ ನಾಯಕ ಸಿದ್ದರಾಮಯ್ಯನವರ ಕುಣಿತ ನೋಡಲು ಗ್ರಾಮದ ಜನ ಮುಗಿ ಬಿದ್ದಿದ್ದರು. ಈ ನೂಕು ನುಗ್ಗಲು ನಡುವೆ ಸಿದ್ದರಾಮಯ್ಯ ಬಿಂದಾಸ್ ಆಗಿ ಸ್ಟೆಪ್ಸ್ ಹಾಕಿದರು.
ಸಿದ್ದರಾಮಯ್ಯನವರ ಡ್ಯಾನ್ಸ್ ಜೋಶ್ ಕಂಡು ಅವರ ಪುತ್ರ, ಶಾಸಕ ಯತೀಂದ್ರ ಅವರೇ ಮೂಕವಿಸ್ಮಿತರಾಗಿದ್ದಾರೆ.
ಅಪ್ಪ ಪ್ರತಿ ವರ್ಷ ಜಾತ್ರೆ ವೇಳೆ ವೀರನ ಕುಣಿತ ಮಾಡೋದು ವಾಡಿಕೆ. ಆದರೆ, ಈ ವಯಸ್ಸಿನಲ್ಲಿ ಅಪ್ಪ ವೀರನ ಕುಣಿತ ಮಾಡ್ತಾರೆ ಅಂತ ಅಂದು ಕೊಂಡಿರಲಿಲ್ಲ. ಅಪ್ಪ ಮೊದಲೇ ಹೇಳಿದ್ರು ನಾನು ಡ್ಯಾನ್ಸ್ ಮಾಡಲ್ಲ ಅಂತ. ಆದ್ರೆ ಜನರ ನೋಡಿ ಉತ್ಸಾಹ ಬಂದು ಅವರು ಸಹ ಹೋಗಿ ಡ್ಯಾನ್ಸ್ ಮಾಡಿದ್ರು. ಅಪ್ಪ ಸ್ಕೂಲ್ ನಿಟ್ಟು ವೀರನ ಕುಣಿತ ಕಲಿತಿದ್ರು. ಹೀಗಾಗಿ ಅವರಿಗೆ ಪ್ರತಿಯೊಂದು ಸ್ಟೆಪ್ ನೆನಪಿದೆ. ನನಗೆ ಈ ರೀತಿ ಕುಣಿಯೋಕೆ ಚಿಕ್ಕಂದಿನಿಂದಲೂ ಬಿಡಲಿಲ್ಲ.
ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿ ಖುಷಿ ಹಂಚಿಕೊಂಡಿದ್ದಾರೆ.