ಬಿಜೆಪಿಯವರು ಹೇಳಿದ್ದಾರೆ ಎನ್ನುವುದನ್ನೇ ಮುಂದಿಟ್ಟುಕೊಂಡು ತಮ್ಮ ಆಹಾರ ಪದ್ಧತಿ ಬಗ್ಗೆ ಪ್ರಶ್ನೆ ಮಾಡಿದ ಪತ್ರಕರ್ತನೊಬ್ಬನಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಮಾತಿನ ವರಸೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಈಗ ದೊಡ್ಡ ಚರ್ಚೆ ನಡೆಯುತ್ತಿದೆ.
ಏಯ್ ಯಾವನಯ್ಯ ನೀನು, ನಾನ್ ವೆಜ್ ನೀನ್ ತಿನ್ನಲ್ವಾ..? ಅವ್ರು ಆರೋಪ ಮಾಡ್ತಾರೆ, ಆರೋಪ. ನೀನು ಯಾವನ್ ಅದನ್ನು ಕೇಳೋಕೆ. ನೀನ್ ಯಾವನಯ್ಯ ಕೇಳೋಕೆ. ನಾನು ಮಾಂಸಾಹಾರಿ, ಮಾಂಸ ತಿಂತೀನಿ. ತಪ್ಪೇನಿದೆ. ನೀನು ಮಾಂಸಾಹಾರಿಯಾದ್ರೆ ಮಾಂಸ ತಿಂತೀಯ, ಸಸ್ಯಹಾರಿಯಾದ್ರೆ ಸಸ್ಯಹಾರ ತಿಂತೀಯ. ನಿನ್ನ ಹ್ಯಾಬಿಟ್ ನಿಂಗೆ, ನನ್ನ ಹ್ಯಾಬಿಟ್ ನಂಗೆ.
ದೇವರು ಇಂಥದ್ದನ್ನೇ ತಿನ್ಕೊಂಡು ಬನ್ನಿ ಅಂತ ಹೇಳಿದ್ದಾರಾ..? ಇಂಥದ್ದೇ ತಿನ್ಬಿಟ್ಟು ಹೋಗು ಅಂತ ಹೇಳಿದ್ದಾರೇನಯ್ಯ..? ಹಿಂದಿನ ದಿನ ತಿನ್ಬಿಟ್ಟು ಹೋದ್ರೆ..ರಾತ್ರಿ ತಿನ್ಬಿಟ್ಟು ಬೆಳಗ್ಗೆ ಹೋಗ್ಬಹುದು. ಮಧ್ಯಾಹ್ನ ತಿಂದ್ಬಿಟ್ಟು ಸಂಜೆ ಹೋಗ್ಬಾರದಾ..?
ಎಂದು ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.