ನಾನು ದೊಡ್ಡ ಓದು ಓದಿಲ್ಲ.. ನಂಗೆ ಕೆಲಸ ಸಿಕ್ಕಿಲ್ಲ ಎಂಬ ನೋವು, ಕೊರಗಿನಲ್ಲಿ ನಿಮ್ಮ ಜೀವನವನ್ನು ವೇಸ್ಟ್ ಮಾಡಿಕೊಳ್ಳಬೇಡಿ. ಸ್ವಯಂ ಉದ್ಯೋಗಗಳು ನಿಮ್ಮ ಮುಂಗೈನಲ್ಲಿಯೇ ಇವೆ.. ಅವುಗಳ ಮೇಲೆ ಗಮನ ಇಟ್ಟಲ್ಲಿ ನಿಮ್ಮ ಬದುಕು ಸುಗಮವಾಗಲಿದೆ..
– ಎಸ್ಎಸ್ಎಲ್ಸಿ, ಪಿಯುಸಿ ಬಳಿಕ ಪದವಿ ವಿದ್ಯಾಭ್ಯಾಸ ಮಾಡಲು ಆಗದೇ ಇದ್ದಲ್ಲಿ, ಕೌಶಲ್ಯಧಾರಿತ ಶಿಕ್ಷಣವನ್ನು ಸ್ಥಳೀಯವಾಗಿಯೇ ಹೊಂದಿ, ಜೀವನಕ್ಕೊಂದು ದಾರಿ ಮಾಡಿಕೊಳ್ಳಬಹುದು
– ಎಸ್ಎಸ್ಎಲ್ಸಿ, ಪಿಯುಸಿಯನ್ನು ಆಧರಿಸಿ ಆನೇಕ ಸರ್ಕಾರಿ ಉದ್ಯೋಗಿಗಳು ಕಾಲ್ ಫಾರ್ ಆಗುತ್ತವೆ. ಆದರೆ, ಇದಕ್ಕೆ ಕಾಂಪಿಟೇಷನ್ ಜಾಸ್ತಿ ಇರುತ್ತದೆ.. ಶ್ರದ್ದೆಯಿಂದ ಓದಿ ಪರೀಕ್ಷೆ ಬರೆದಲ್ಲಿ ಉದ್ಯೋಗವನ್ನು ನೀವು ಹೊಂದಬಹುದು.
– ಮೆಕಾನಿಕಲ್ ಕೋರ್ಸ್ ಮಾಡಿಲ್ಲದಿದ್ದರೂ ಒಂದೆರಡು ವರ್ಷ ವಾಹನ ಮತ್ತು ಇತರೆ ಯಂತ್ರಗಳನ್ನು ರಿಪೇರಿ ಮಾಡುವ ಮೆಕಾನಿಕ್ ಬಳಿ ಕೆಲಸ ಮಾಡಿದಲ್ಲಿ, ಆ ಕೌಶಲ್ಯ ನಿಮಗೆ ವೃದ್ಧಿಸುತ್ತದೆ. ಕೆಲ ದಿನಗಳ ಬಳಿಕ ನೀವೇ ಆ ಕೆಲಸಗಳನ್ನು ಸ್ವಂತವಾಗಿ ಆರಂಭಿಸಬಹುದು.
– ವಿದ್ಯುತ್ ವೈರಿಂಗ್ ಮಾಡುವುದಲ್ಲಿ ಪ್ರಾವೀಣ್ಯತೆ ಹೊಂದಿದಲ್ಲಿ ಸಾಕಷ್ಟು ಅವಕಾಶಗಳು ಲಭಿಸುತ್ತವೆ. ಪಟ್ಟಣ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳು ಹೆಚ್ಚೆಚ್ಚು ನಡೆಯುವುದರಿಂದ ಜೀವನೋಪಾಯಕ್ಕೇನು ತೊಂದರೆ ಆಗಲ್ಲ.
– ಐಐಟಿ,ಫಿಟ್ಟರ್, ಪ್ಲಂಬರ್, ಎಲೆಕ್ಟ್ರಿಕ್ ಕೋರ್ಸ್ ಮಾಡಿದಲ್ಲಿ ಅದಕ್ಕೆ ತಕ್ಕಂತಹ ಉದ್ಯೋಗ ಸಿಗುತ್ತದೆ. ಒಂದೊಮ್ಮೆ ಕೋರ್ಸ್ ಮಾಡದಿದ್ದರೂ ಆಯಾ ಕೆಲಸಗಳಲ್ಲಿ ನೈಪುಣ್ಯತೆ ಇರುವವರ ಬಳಿ ಕೆಲಸ ಮಾಡಿದಲ್ಲಿ ಆದಾಯಕ್ಕೊಂದು ಮಾರ್ಗ ಲಭಿಸಲಿದೆ.
– ಡ್ರೈವಿಂಗ್ ಲೈಸೆನ್ಸ್ ಇದ್ದು,ವಾಹನ ಚಾಲನೆ ಮಾಡುವುದರಲ್ಲಿ ಎಕ್ಸ್ಪರ್ಟ್ ಆಗಿದ್ದಲ್ಲಿ ಪಟ್ಟಣ ಪ್ರದೇಶಗಳಲ್ಲಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡಬಹುದು.. ಖಾಲಿ ಇರುವ ಸಮಯದಲ್ಲಿ ಓದಿಗೂ ಅವಕಾಶ ಲಭಿಸುತ್ತದೆ.
– ಫ್ರಿಡ್ಜ್, ವಾಷಿಂಗ್ ಮೆಷಿನ್, ಎಸಿ, ವಾಟರ್ ಹೀಟರ್, ಫ್ಯಾನ್, ವಾಟರ್ ಮೋಟಾರ್ ಗಳು ಬಹುತೇಕರ ಮನೆಗಳಲ್ಲಿ ಇರುತ್ತವೆ. ಯಾವುದೋ ಒಂದು ಕಾರಣಕ್ಕೆ ವರ್ಷಕ್ಕೆ ಎರಡ್ಮೂರು ಬಾರಿ ಯಾವುದಾದರೊಂದು ರಿಪೇರಿಗೆ ಬಂದೇ ಬರುತ್ತದೆ.. ಇವುಗಳನ್ನು ರಿಪೇರಿಮಾಡುವ ಕೌಶಲ್ಯ ಹೊಂದಿದ್ದಲ್ಲಿ , ಇದರ ಮೂಲಕವೇ ನಿಮ್ಮ ಜೀವನವನ್ನು ಕಟ್ಟಿಕೊಳ್ಳಬಹುದು.
– ಇತ್ತೀಚಿಗೆ ಓಲಾ,ಊಬೆರ್, ರ್ಯಾಪಿಡ್ ನಂತಹ ಸಂಸ್ಥೆಗಳಲ್ಲಿ ಸ್ವಂತ ಬೈಕ್ ಮೂಲಕ ಪ್ರಯಾಣಿಕರನ್ನು ಕರೆದೊಯ್ಯುವ ಸೇವೆಗಳು ಲಭ್ಯ ಇವೆ.. ಇವುಗಳ ಮೂಲಕವೂ ನೀವು ಆದಾಯ ಹೊಂದಬಹುದು.
– ಒಂದಿಷ್ಟು ಟೆಕ್ನಾಲಜಿ ನಿಮಗೆ ಗೊತ್ತಿದ್ದರೇ ಎಲ್ಲಾ ರೀತಿಯ ಸೇವೆಗಳನ್ನು ನೀಡುವ ಒಂದು ವೆಬ್ ಸೈಟ್ ರೂಪಿಸಿ, ಅದರಲ್ಲಿ ನಿಪುಣರ ಮಾಹಿತಿಗಳನ್ನು ಇಟ್ಟುಕೊಳ್ಳಬೇಕು. ಕಸ್ಟಮರ್ ಬಯಸಿದ ಸೇವೆಗಳನ್ನು ನಿಪುಣರ ಮೂಲಕ ಮಾಡಿಸಿ.. ನೀವು ಕುಳಿತಲ್ಲೇ ಆದಾಯ ಹೊಂದಬಹುದು