ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಗೆ ದಿನಗಣನೆ ಶುರುವಾಗಿದೆ. ಕಳೆದ ಆರು ವರ್ಷಗಳಿಂದ ಡೇಟಿಂಗ್ನಲ್ಲಿದ್ದ ಈ ಜೋಡಿ ಮದುವೆ ಎಂಬ ಅಫಿಷಿಯಲ್ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಆರು ವರ್ಷಗಳಿಂದ ಪ್ರೀತಿಸಿ ಒಬ್ಬರನೊಬ್ಬರು ಅರ್ಥ ಮಾಡಿಕೊಂಡು ಈಗ ಗುರು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ಮದುವೆ ಆಗ್ತಿದ್ದಾರೆ. ಈ ಹಿಂದೆ ಡೆಸ್ಟಿನೇಷನ್ ವೆಡ್ಡಿಂಗ್ ಕುರಿತು ಯೋಚಿಸಿದ್ದ ಈ ಜೋಡಿ, ಈಗ ಸರಳವಾಗಿ ಮದುವೆ ಆಗಲು ನಿರ್ಧರಿಸಿದ್ದಾರೆ.
ಜೂನ್ 9 ರಂದು ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನದಲ್ಲಿ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮದುವೆ ಆಗಲು ನಿರ್ಧರಿಸಿದ್ದಾರೆ. ಬಳಿಕ ಚಿತ್ರರಂಗದ ಸ್ನೇಹಿತರಿಗೆಂದೇ ಆರತಕ್ಷತೆ ಮಾಡಲಾಗುತ್ತಿದೆ. ಈ ಪಾರ್ಟಿಯಲ್ಲಿ ಸಮಂತಾ, ವಿಜಯ್ ಸೇತುಪತಿ, ರಜನೀಕಾಂತ್, ಅಜಿತ್, ದಳಪತಿ ವಿಜಯ್ ಹೀಗೆ ಸೌತ್ ಸಿನಿರಂದ ಸಿನಿ ತಾರೆಯರ ದಂಡೇ ನಯನತಾರಾ ಮತ್ತು ವಿಘ್ನೇಶ್ ಶಿವನ್ ಚನ್ನೈನ ಅದ್ದೂರಿ ಪಾರ್ಟಿಯಲ್ಲಿ ಸಾಕ್ಷಿಯಾಗಲಿದ್ದಾರೆ. ಅದಕ್ಕಾಗಿಯೇ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.
`ಕಾತುವಾಕುಲ ಎರಡು ಕಾದಲ್’ ಚಿತ್ರದ ರಿಲೀಸ್ ವೇಳೆ ಈ ಜೋಡಿ ತಿರುಪತಿಗೆ ಭೇಟಿ ನೀಡಿತ್ತು. ಇದೀಗ ತಮ್ಮ ವೈವಾಹಿಕ ಜೀವನ ಕೂಡ ಇಲ್ಲಿಂದಲೇ ಆರಂಭಿಸಲು ನಯನತಾರಾ ಮತ್ತು ವಿಘ್ನೇಶ್ ಶಿವನ್ ನಿರ್ಧರಿಸಿದೆ.