ಕರುನಾಡ ಚತ್ರವರ್ತಿ, ಹ್ಯಾಟ್ರಿಕ್ ಹೀರೋ ನಟ ಡಾ. ಶಿವರಾಜ್ ಕುಮಾರ್ ಅವರು ಇಂದು ಜುಲೈ 12ಕ್ಕೆ 60ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.
ಇವರ 60 ನೇ ವಸಂತದ ಸರ್ಪ್ರೈಸ್ ಆಗಿ ಹಲವು ಚಿತ್ರಗಳ ಟೈಟಲ್ ಲಾಂಚ್ ಆಗಿವೆ. ಅದರ ಜೊತೆ ಇದುವರೆಗೂ ಸಂಗೀತ ನಿರ್ದೇಶಕರಾಗಿ ರಾಜ್ಯದ ಜನತೆಗೆ ಪರಿಚಿತರಾಗಿದ್ದ ಅರ್ಜುನ್ ಜನ್ಯಾ ಅವರು ಇದೀಗ ನಿರ್ದೇಶನಕ್ಕಿಳಿದಿದ್ದಾರೆ.
ಶಿವರಾಜ್ಕುಮಾರ್ ಅವರ 60 ನೇ ಹುಟ್ಟುಹಬ್ಬದಂದು ಅರ್ಜುನ್ ಜನ್ಯಾ ಕಥೆ ಬರೆದು ನಿರ್ದೇಶನ ಮಾಡಲಿರುವ ‘ಫಾರ್ಟಿಫೈವ್’ (45) ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.
ಈ ಚಿತ್ರವನ್ನು ಪ್ಯಾನ್ ಇಂಡಿಯಾ ಚಿತ್ರವನ್ನಾಗಿ ನಿರ್ಮಾಣ ಮಾಡಲು ನಿರ್ದೇಶಕ ಅರ್ಜುನ್ ಜನ್ಯಾ ನಿರ್ಧರಿಸಿದ್ದಾರೆ. ಈಗಾಗಲೇ ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗಿನಲ್ಲಿ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇನ್ನು, ಚಿತ್ರ ಬಿಡುಗಡೆ ಹೊತ್ತಿಗೆ ಮತ್ತಷ್ಟು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಬಹುದು ಎಂದು ಹೇಳಲಾಗುತ್ತಿದೆ.
45 ಚಿತ್ರದ ಪೋಸ್ಟರ್ ನಿಗೂಢವಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಪೋಸ್ಟರ್ ಬಿಟ್ಟರೆ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ. ಈ ಸಿನಿಮಾದಲ್ಲಿ ಯಾರೆಲ್ಲ ನಟಿಸಲಿದ್ದಾರೆ, ಯಾವ ರೀತಿಯ ಸಿನಿಮಾ ಎನ್ನುವ ಹೆಚ್ಚಿನ ಮಾಹಿತಿ ಇನ್ನು ಬಹಿರಂಗವಾಗಬೇಕಿದೆ.
ಇನ್ನು, ಶಿವರಾಜ್ಕುಮಾರ್ ನಅನೆಯ ಫಾರ್ಟಿಫೈವ್ (45) ಚಿತ್ರದ ಪೋಸ್ಟರ್ ಅನ್ನು ಬೇರೆ ಬೇರೆ ಚಿತ್ರರಂಗದ ನಾಯಕ ನಟರು ಬಿಡುಗಡೆಗೊಳಿಸಿದ್ದಾರೆ. ತೆಲುಗು ಪೋಸ್ಟರ್ ಅನ್ನು ಸ್ಟಾರ್ ನಟ ಅಕ್ಕಿನೇನಿ ನಾಗಾರ್ಜುನ, ತಮಿಳು ನಟ ಶಿವಕಾರ್ತಿಕೇಯನ್ ಮತ್ತು ಮಲಯಾಳಂನಲ್ಲಿ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಅನೌನ್ಸ್ ಮಾಡಿ ಶಿವಣ್ಣನಿಗೆ ಪ್ರೀತಿಯ ವಿಶ್ ಮಾಡಿದ್ದಾರೆ.
ಈ ಬಗ್ಗೆ ನಟ ಶಿವರಾಜ್ಕುಮಾರ್ ಮಾಹಿತಿ ನೀಡಿದ್ದು, ‘ನನ್ನ ಮುಂದಿನ ಚಿತ್ರ ’45’, ಪೋಸ್ಟರ್ ನಿಮಗಾಗಿ. ಅರ್ಜುನ್ ಜನ್ಯ ರವರ ಚೊಚ್ಚಲ ನಿರ್ದೇಶನ ಹಾಗು ಎಂ.ರಮೇಶ್ ರೆಡ್ಡಿ ರವರ ನಿರ್ಮಾಣ. ನನ್ನ ಜನ್ಮದಿನದಂದು ಶೀರ್ಷಿಕೆಯನ್ನು ಪ್ರೀತಿಯಿಂದ ಬಹಿರಂಗಪಡಿಸಿದ್ದಕ್ಕಾಗಿ ಅಕ್ಕಿನೇನಿ ನಾಗಾರ್ಜುನ, ಶಿವಕಾರ್ತಿಕೇಯನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅವರಿಗೆ ಧನ್ಯವಾದಗಳು. ಅಭಿಮಾನಿ ದೇವರುಗಳಿಗೆ ನನ್ನ ಸಮಸ್ಕಾರ’ ಎಂದು ಹೇಳಿದ್ದಾರೆ.
ನನ್ನ ಮುಂದಿನ ಚಿತ್ರ “45” !! ಪೋಸ್ಟರ್ ನಿಮಗಾಗಿ @ArjunJanyaMusic ರವರ ಚೊಚ್ಚಲ ನಿರ್ದೇಶನ ಹಾಗು ಎಂ.ರಮೇಶ್ ರೆಡ್ಡಿ ರವರ ನಿರ್ಮಾಣ.
ನನ್ನ ಜನ್ಮದಿನದಂದು ಶೀರ್ಷಿಕೆಯನ್ನು ಪ್ರೀತಿಯಿಂದ ಬಹಿರಂಗಪಡಿಸಿದ್ದಕ್ಕಾಗಿ @iamnagarjuna @Siva_Kartikeyan @PrithviOfficial ಎಲ್ಲರಿಗೂ ಧನ್ಯವಾದಗಳು.
ಅಭಿಮಾನಿ ದೇವರುಗಳಿಗೆ ನನ್ನ 🙏🏼 pic.twitter.com/fd0ax4b8rg— DrShivaRajkumar (@NimmaShivanna) July 12, 2022