ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ ತಾಲೂಕು ಕಚೇರಿಯ ಭದ್ರತಾ ಕೊಠಡಿಯಲ್ಲಿಟ್ಟಿದ್ದ 1.24 ಕೋಟಿ ರೂಪಾಯಿ ಮೊತ್ತವನ್ನು ಕದ್ದ ಪ್ರಕರಣ ಸಂಬಂಧ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರಲ್ಲಿ ಮೂವರು ಎಸ್ಕೆಡಿಆರ್ಪಿ ಟ್ರಸ್ಟ್ನ ನೌಕರರು ಎಂದು ಪೊಲೀಸರು ತಿಳಿಸಿದ್ದಾರೆ.
ಧಾರವಾಡ ನಗರದ ರಾಯಪುರದಲ್ಲಿರುವ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಟ್ರಸ್ಟ್ನ ತಾಲೂಕು ಕಚೇರಿಯ ಭದ್ರತಾ ಕೊಠಡಿಯಲ್ಲಿಟ್ಟಿದ್ದ 1 ಕೋಟಿ 24 ಲಕ್ಷ ರೂಪಾಯಿ ಮೊತ್ತವನ್ನು ಕಳವು ಮಾಡಲಾಗಿತ್ತು.
ಬಂಧಿತರಿಂದ 79 ಲಕ್ಷದ 89 ಸಾವಿರ ರೂಪಾಯಿ ಮತ್ತು ಕೃತ್ಯಕ್ಕೆ ಬಳಸಿದ ಕಾರು, ಎರಡು ದ್ವಿಚಕ್ರ ವಾಹನ, ನಾಲ್ಕು ಮೊಬೈಲ್ನ್ನು ವಶಪಡಿಸಿಕೊಳ್ಳಲಾಗಿದೆ.
ಧಾರವಾಡ ಜಿಲ್ಲೆಯ ಸವಣೂರಿನ ಕುಶಾಲ ಕುಮಾರ, ನವಲಗುಂದದ ಬಸವರಾಜ, ಮಹಾಂತೇಶ, ಜಿಲಾನಿ, ಪರಶುರಾಮ, ರಂಗಪ್ಪ, ಮಂಜುನಾಥ, ಕಿರಣ, ರಜಾಕ್ ಅಹಮದ್, ವೀರೇಶ ಬಂಧಿತರು.
ಇವರಲ್ಲಿ ಕುಶಾಲ ಕುಮಾರ, ಬಸವರಾಜ, ಮಹಾಂತೇಶ ಈ ಮೂವರು ಎಸ್ಕೆಡಿಆರ್ಪಿ ಟ್ರಸ್ಟ್ನ ನೌಕರರು.
ಕಚೇರಿಯ ಶೌಚಾಲಯದ ಕಿಂಡಿ ಮೂಲಕ ನುಗ್ಗಿ ಸೇಫ್ಟಿ ಲಾಕರ್ ಒಡೆದು ಹಣ ಕಳವು ಮಾಡಿದ್ದರು ಎಂದು ಹುಬ್ಬಳ್ಳಿ ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾಹಿತಿ ನೀಡಿದ್ದಾರೆ.
ADVERTISEMENT
ADVERTISEMENT