ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕೊರೋನಾ ಸೋಂಕಿನಿಂದ ದೆಹಲಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ, ಅವರಿಗೆ ಉಸಿರಾಟದ ಸಮಸ್ಯೆ ತೀವ್ರವಾಗಿದೆ. ಮೂಗಿನಿಂದ ರಕ್ತ ಉಸುರುತ್ತಿದೆ. ಆಸ್ಪತ್ರೆಗೆ ತೀವ್ರ ನಿಗಾ ಘಟಕಕ್ಕೆ ಅವರನ್ನು ದಾಖಲಿಸಲಾಗುತ್ತಿದ್ದು, ಚಿಕಿತ್ಸೆ ಮುಂದುವರೆಯುತ್ತಿದೆ ಎಂದು ಶುಕ್ರವಾರ ಹೊರಡಿಸಿದ ಪ್ರಕಟಣೆಯಲ್ಲಿ ಕಾಂಗ್ರೆಸ್ ತಿಳಿಸಿದೆ.
ಸೋನಿಯಾ ಗಾಂಧಿ(75) ಕೊರೋನಾ ಸೋಂಕಿಗೆ ಒಳಗಾಗಿ ದೆಹಲಿಯ ಗಂಗ ರಾಮ್ ಆಸ್ಪತ್ರೆಗೆ ಇದೇ ಜೂನ್ 12 ರಂದು ದಾಖಲಾಗಿದ್ದರು. ಅನಂತರ ಅವರಿಗೆ ಉಸಿರಾಟದ ಸಮಸ್ಯೆ ತೀವ್ರಗೊಂಡು ಮೂಗಿನಿಂದ ರಕ್ತ ಒಸರುತ್ತಿದೆ ಎಂದು ತಿಳಿದುಬಂದಿದೆ. ಇವರಿಗೆ ಜೂನ್ 2 ರಂದೇ ಕೊರೋನಾ ಸೋಂಕು ದೃಢಗೊಂಡಿತ್ತು.
A statement on Congress President’s health condition. pic.twitter.com/4tVBtgyhEi
— Jairam Ramesh (@Jairam_Ramesh) June 17, 2022
ಪ್ರಸ್ತುತ, ಕೊರೋನಾದ ಇತರೆ ಲಕ್ಷಣಗಳ ಜೊತೆ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಯುತ್ತಿದೆ ಎಂದು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಹೇಳಿದ್ದಾರೆ.
ಪುತ್ರ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರು ಸೋನಿಯಾ ಗಾಂಧಿಯವರ ಜೊತೆ ಆಸ್ಪತ್ರೆಯಲ್ಲಿಯೇ ಇದ್ದಾರೆ ಎಂದು ತಿಳಿದುಬಂದಿದೆ.