ಬಿಜೆಪಿ ನೇತೃತ್ವದ ಎನ್ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಉತ್ತರಪ್ರದೇಶದ ಸಮಾಜವಾದಿ ಪಕ್ಷ ಒಕ್ಕೂಟದ ಎಸ್ಬಿಎಸ್ಪಿ ಪಕ್ಷ ಬೆಂಬಲ ಘೋಷಣೆ ಮಾಡಿದೆ.
ಶುಕ್ರವಾರ ಸಾಯಂಕಾಲ 9 ಗಂಟೆಗೆ ಮಾಧ್ಯಮಗೋಷ್ಠಿ ನಡೆಸಿದ ಸುಹೇಲ್ ದೇವ್ ಭಾರತೀಯ ಜನತಾ ಪಾರ್ಟಿ (ಎಸ್ಬಿಎಸ್ಪಿ)ಯ ನಾಯಕ ಓಂ ಪ್ರಕಾಶ್ ರಾಜ್ ಬರ್ ಅವರ ಈ ಘೋಷಣೆ ಮಾಡಿದ್ದಾರೆ.
ನಮ್ಮ ಪಕ್ಷದ ನಾಯಕರು ಹಾಗೂ ಮುಂದಾಳುಗಳೊಂದಿಗೆ ಚರ್ಚಿಸಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಓಂ ಪ್ರಕಾಶ್ ರಾಜ್ಬರ್ ಹೇಳಿದ್ದಾರೆ.
ದ್ರೌಪದಿ ಮುರ್ಮು ಉತ್ತರ ಪ್ರದೇಶದ ಲಕ್ನೋಗೆ ಭೇಟಿ ನೀಡುವ ಮುಂಚೆ ಬಿಜೆಪಿ ನಡೆಸಿದ್ದ ಸಭೆಗೆ ರಾಜ್ಬರ್ ಅವರು ಹಾಜರಾಗಿದ್ದರು.
ಉತ್ತರಪ್ರದೇಶದ ವಿಧಾನಸಭೆಯಲ್ಲಿ ಎಸ್ಬಿಎಸ್ಪಿಯ 6 ಜನ ಶಾಸಕರಿದ್ದಾರೆ.
ಎನ್ಡಿ ರಾಷ್ಟ್ರಪತಿ ಅಭ್ಯರ್ಥಿಗೆ ದ್ರೌಪದಿ ಮುರ್ಮು ಅವರಿಗೆ ಈಗಾಗಲೇ ಬಹುತೇಕ ಎನ್ಡಿಎ ಹೊರತಾದ ಪ್ರಾದೇಶಿಕ ಪಕ್ಷಗಳು ಬೆಂಬಲ ಸೂಚಿಸಿವೆ. ಇದೇ ಜುಲೈ 18 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಭರ್ಜರಿ ಜಯಗಳಿಸುವ ಸಾಧ್ಯತೆಯಿದೆ.