ವಿದ್ಯುಚ್ಛಕ್ತಿ ಯೋಜನೆಯನ್ನು ಗೌತಮ್ ಅದಾನಿಗೆ ನೀಡಿರುವ ಬಗ್ಗೆ ಶ್ರೀಲಂಕಾದಲ್ಲಿ ವಿವಾದ ಸೃಷ್ಠಿಯಾಗಿದೆ. ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಷೆ ಅವರು ನರೇಂದ್ರ ಮೊದಿಯವರ ಒತ್ತಡಕ್ಕೆ ಒಳಗಾಗಿದ್ದರು ಎಂಬ ಆರೋಪ ಮಾಡಿದ್ದ ಶ್ರೀಲಂಕಾದ ಅಧಿಕೃತ ಅಧಿಕಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಶ್ರೀಲಂಕಾದ ವಿದ್ಯುಚ್ಛಕ್ತಿ ನಿಗಮದ ಅಧ್ಯಕ್ಷ ಎಂಎಂಡಿ ಪರ್ಡಿನಾಂಡೋ ಅವರು, ಶುಕ್ರವಾರದಂದು ಪಾರ್ಲಿಮೆಂಟರಿ ಕಮಿಟಿಯಲ್ಲಿ ಶ್ರೀಲಂಕಾದ ಅಧ್ಯಕ್ಷ ಗೋಟಬಯಾ ರಾಜಪಕ್ಷ ಅವರು ವಿಂಡ್ ಪವರ್ ಪ್ರಾಜಕ್ಟ್ ಅನ್ನು ಅದಾನಿ ಕಂಪೆನಿಗೆ ನೀಡುವಂತೆ ನರೇಂದ್ರ ಮೋದಿ ಒತ್ತಡ ಹೇರಿದ್ದರು ಎಂಬ ಹೇಳಿಕೆ ನೀಡಿದ್ದರು. ಆದರೆ, ಭಾನುವಾರದಂದು ಉಲ್ಟಾ ಹೊಡೆದಿದ್ದ ಇವರು, ಬಾಯ್ತಪ್ಪಿನಿಂದ ಈ ಮಾತು ಹೇಳಿದ್ದೇನೆ ಎಂದು ಹೇಳಿದ್ದಾರೆ.
ಶ್ರೀಲಂಕಾದ ಮನ್ನರ್ ಜಿಲ್ಲೆಯಲ್ಲಿನ 500 ಮೆಗಾವ್ಯಾಟ್ ನವೀಕರಿಸಬಹುದಾದ ವಿದ್ಯುಚ್ಛಕ್ತಿ ಯೋಜನೆ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ವಿದ್ಯುಚ್ಛಕ್ತಿ ನಿಗಮ ಅಧ್ಯಕ್ಷ ಎಂಎಂಡಿ ಪರ್ಡಿನಾಂಡೋ ಅವರು ಸಂಸತ್ತಿನ ಕಮಿಟಿಯ ಮುಂದೆ ಹೇಳಿಕೆ ನೀಡಿರುವ ವಿಡಿಯೋ ಟ್ವಿಟರ್ನಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಅಧ್ಯಕ್ಷ ಗೋಟಬಯ ರಾಜಪಕ್ಷ ಅವರು ನರೇಂದ್ರ ಮೋದಿಯ ಒತ್ತಡದಲ್ಲಿದ್ದರು ಎಂದು ಹೇಳಿದ್ದಾರೆ.
ಈ ಹೇಳಿಕೆ ನೀಡಿದ 3 ದಿನಗಳ ನಂತರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಹೇಳಿಕೆ ಬಗ್ಗೆ ಟ್ವೀಟ್ ಮಾಡಿರುವ ಗೋಟಬಯ ರಾಜಪಕ್ಷ ಅವರು ವಿದ್ಯುಚ್ಛಕ್ತಿ ನಿಗಮ ಅಧ್ಯಕ್ಷ ಎಂಎಂಡಿ ಪರ್ಡಿನಾಂಡೋ ಅವರು ಹೇಳಿದ, ನಿರ್ಧಿಷ್ಟ ವ್ಯಕ್ತಿ ಅಥವಾ ಸಂಸ್ಥೆಗೆ ಒತ್ತಡದ ಕಾರಣಕ್ಕೆ ನೀಡಲಾಗಿದೆ ಎಂಬ ಹೇಳಿಕೆಯನ್ನು ತಿರಸ್ಕರಿಸುತ್ತೇನೆ ಎಂದು ಹೇಳಿದ್ದಾರೆ.