ಇಂದು ಬುಧವಾರ ಶ್ರೀಲಂಕಾದಲ್ಲಿ ನೂತನ ಅಧ್ಯಕ್ಷರ ಆಯ್ಕೆಯ ಮತದಾನ ನಡೆದು, ಮತ ಎಣಿಕೆಯೂ ಪೂರ್ಣಗೊಂಡಿದೆ. ನೂತನ ಅಧ್ಯಕ್ಷರಾಗಿ ರನೀಲ್ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಈ ಹಿಂದಿನ ಅಧ್ಯಕ್ಷರಾಗಿದ್ದ ಗೋಟಬಯಾ ರಾಜಪಕ್ಷ ಅವರು ದೇಶಬಿಟ್ಟು ಸಿಂಗಾಪುರಕ್ಕೆ ಓಡಿಹೋಗಿ, ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅನಂತರ ಪ್ರಧಾನಿಯಾಗಿದ್ದ ರನೀಲ್ ವಿಕ್ರಮಸಿಂಘೆ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು.
ಶ್ರೀಲಂಕಾದಲ್ಲಿ ಆರ್ಥಿಕ ತುರ್ತು ಪರಿಸ್ಥಿತಿಯಿಂದಾಗಿ ದೇಶದ ಜನರ ಬೃಹತ್ ಪ್ರತಿಭಟನೆ ನಡೆಸಿದ್ದರು. ಅಧ್ಯಕ್ಷರ ಮನೆಗೂ ಮುತ್ತಿಗೆ ಹಾಕಿದ್ದರು. ಆ ಬೆನ್ನಲ್ಲೇ, ಅಧ್ಯಕ್ಷರು ದೇಶ ಬಿಟ್ಟು ಓಡಿಹೋಗಿದ್ದರು.
ಇಂದು ನಡೆದ ಶ್ರೀಲಂಕಾದ ನೂತನ ಅಧ್ಯಕ್ಷರ ಚುನಾವಣೆಗೆ ಹಂಗಾಮಿ ಅಧ್ಯಕ್ಷರಾಗಿದ್ದ ರನೀಲ್ ವಿಕ್ರಮಸಿಂಘೆ, ಮಾಜಿ ಪ್ರತ್ರಕರ್ತ ದಲ್ಲಾಸ್ ಸಲ್ಲಾಹೆಪ್ಪೆರುಮ, ಅನುರ ಕುಮಾರ ದುಸ್ಸನಾಯಕ ಅವರು ಸ್ಪರ್ಧಿಸಿದ್ದರು.
ಮತದಾನ ನಡೆದು, ಮತ ಎಣಿಕೆಯೂ ಮುಕ್ತಾಯಗೊಂಡಿದ್ದು ರನೀಲ್ ವಿಕ್ರಮಸಿಂಘೆ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಶ್ರೀಲಂಕಾ ಇತಿಹಾಸದಲ್ಲಿ 1978 ರ ನಂತರ ಇದೇ ಮೊದಲ ಬಾರಿಗೆ ಮಧ್ಯಂತರ ಅಧ್ಯಕ್ಷರ ಆಯ್ಕೆಗೆ ಮತದಾನ ನಡೆದಿದೆ. ಆದರೆ, 1993 ರಲ್ಲಿ ಅಧ್ಯಕ್ಷರಾಗಿದ್ದ ರಣಸಿಂಘೆ ಪ್ರೇಮದಾಸ ಅವರ ಹತ್ಯೆ ನಂತರ ಒಂದು ಮಧ್ಯಂತರ ಚುನಾವಣೆ ನಡೆದಿತ್ತು.