ಕಳೆದ ನಾಲ್ಕು ದಿನಗಳಿಂದ ಸೇನೆಯ ಆಶ್ರಯದಲ್ಲಿ ತಲೆ ಮರೆಸಿಕೊಂಡಿದ್ದ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಷೆ ಇಂದು ಬೆಳಗಿನಜಾವ ಲಂಕಾ ವಾಯುಸೇನೆಯ ವಿಶೇಷ ವಿಮಾನದಲ್ಲಿ ಪತ್ನಿ ಮತ್ತು ಇಬ್ಬರು ಅಂಗರಕ್ಷಕರ ಸಮೇತ ಮಾಲ್ಡಿವ್ಸ್ ರಾಜಧಾನಿ ಮಾಲೆಗೆ ಪರಾರಿಯಾಗಿದ್ದಾರೆ.
ತನಗೆ ವಿದೇಶಕ್ಕೆ ತೆರಳಲು ಅವಕಾಶ ನೀಡಿದಲ್ಲಿ ಮಾತ್ರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಗೊಟಬಯ ಷರತ್ತು ವಿಧಿಸಿದ್ದರು. ಆದರೆ ಈಗ ನೋಡಿದರೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದೆಯೇ ಗೊಟಬಯ ದೇಶ ತೊರೆದಿದ್ದಾರೆ.
ಮೂಲಗಳ ಮಾಹಿತಿ ಪ್ರಕಾರ, ಜನರ ಆಕ್ರೋಶದಿಂದ ಪಾರಾಗಲು ಗೊಟಬಯ ಮೂರು ದಿನಗಳ ಹಿಂದೆಯೇ ಜುಲೈ 13ಕ್ಕೆ ಅನ್ವಯ ಆಗುವಂತೆ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿ ಪ್ರಧಾನಿ ಮತ್ತು ಸ್ಪೀಕರ್ ಕಾರ್ಯಾಲಯಕ್ಕೆ ರವಾನೆ ಮಾಡಿದ್ದಾರೆ. ಇವತ್ತು ಸ್ಪೀಕರ್ ಈ ಬಗ್ಗೆ ಘೋಷಣೆ ಮಾಡುವ ಸಂಭವ ಇದೆ.