ಶ್ರೀಲಂಕಾ ಪ್ರಧಾನಿ ಮಹೀಂದ್ರ ರಾಜಪಕ್ಷ ರಾಜೀನಾಮೆ ಬಳಿಕ ದ್ವೀಪ ರಾಷ್ಟçದಲ್ಲಿ ವ್ಯಾಪಕ ಹಿಂಸಾಚಾರ ನಡೆದಿದ್ದು, ಆಡಳಿತ ಪಕ್ಷದ ಸಂಸದನನ್ನು ಹತ್ಯೆ ಮಾಡಲಾಗಿದೆ.
ಮಹೀಂದ್ರ ರಾಜಪಕ್ಷ ರಾಜೀನಾಮೆ ಬಳಿಕ ರಾಜಪಕ್ಷ ಬೆಂಬಲಿಗರು ದೇಶಾದ್ಯಂತ ಗೂಂಡಾಗಿರಿ ನಡೆಸಿದ್ದಾರೆ. ಹಿಂಸಾಚಾರದಲ್ಲಿ ಸಂಸದ ಅಮರಕೀರ್ತಿ ಅತುಕೊರಾಲಾ ಹತ್ಯೆಯಾಗಿದೆ. ಹಲವರು ಗಾಯಗೊಂಡಿದ್ದಾರೆ. ರಾಜಪಕ್ಷ ಬೆಂಬಲಿಗರು ಆರ್ಥಿಕ ಬಿಕ್ಕಟ್ಟು ಖಂಡಿಸಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ ದಾಳಿ ನಡೆಸಿದ್ದಾರೆ.
ಪ್ರಧಾನಿ ರಾಜೀನಾಮೆ ಹಿನ್ನೆಲೆಯಲ್ಲಿ ಈಗಿರುವ ಸರ್ಕಾರ ರದ್ದಾಗಿದೆ. ಶ್ರೀಲಂಕಾದ ಸಂಸತ್ತು ಅಮಾನತುಗೊಂಡಿದೆ. ಹೊಸ ಸರ್ಕಾರ ರಚನೆಗೆ ಸರ್ವ ಪಕ್ಷಗಳಿಗೂ ಅಧ್ಯಕ್ಷ ಗೊಟಬಯಾ ರಾಜಪಕ್ಷ ಆಹ್ವಾನ ನೀಡಿದ್ದರೂ ಅತೀ ದೊಡ್ಡ ವಿರೋಧ ಪಕ್ಷ ಸರ್ಕಾರ ರಚನೆಯಲ್ಲಿ ಭಾಗಿ ಆಗಲ್ಲ ಎಂದು ಸ್ಪಷ್ಟಪಡಿಸಿದೆ.