ಆಯೋಧ್ಯೆ: ಕೋಟ್ಯಾಂತರ ಹಿಂದೂಗಳ ಕನಸು ನನಸಾಗಿದೆ. ಶತ ಶತಮಾನಗಳ ಹೋರಾಟ ಸಾರ್ಥವಾಗಿದೆ. ಆಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ವಿಗ್ರಹಕ್ಕೆ ಪ್ರಾಣಪ್ರತಿಷ್ಠೆ ಮಾಡಿದ ಪ್ರಧಾನಿ ಮೋದಿ ಬಳಿಕ ರಾನಜನ್ಮಭೂಮಿ ಆವರದಲ್ಲಿ ಆಯೋಜಿಸಿದ ಸಭೆಯಲ್ಲಿ ದೇಶದ ಜನತೆಯನ್ನುದ್ದೇಶಿ ಮಾತನಾಡಿದ್ದಾರೆ.ಸಿಯಾವರ ರಾಮಚಂದ್ರ ಎಂದು ಭಾಷಣ ಆರಂಭಿಸಿದ ಮೋದಿ, ಹೋರಾಟ, ತ್ಯಾಗ ಬಲಿದಾನ ಬಳಿಕ ನಮ್ಮ ಪ್ರಭು ಶ್ರೀರಾಮ ಚಂದ್ರ ಇಂದು ಆಯೋಧ್ಯೆಗೆ ಆಗಮಿಸಿದ್ದಾನೆ ಎಂದರು. ನಮ್ಮ ರಾಮ ಲಲ್ಲಾ ಟೆಂಟ್ನಲ್ಲಿ ಇರುವುದಿಲ್ಲ. ನಮ್ಮ ರಾಮಲಲ್ಲಾ ಭವ್ಯ ರಾಮ ಮಂದಿರದಲ್ಲಿ ವಿರಾಜಮಾನನಾಗಿದ್ದಾನೆ. ಇಂದು ಪ್ರಾಣಪ್ರತಿಷ್ಠೆಯ ಅನುಭೂತಿ ವಿಶ್ವದ ಮೂಲೆ ಮೂಲೆಗೆ ತಲುಪಿದೆ ಎಂದು ಮೋದಿ ಹೇಳಿದ್ದಾರೆ.
1000 ವರ್ಷಗಳ ಬಳಿಕವೂ ಇಂದಿನ ದಿನಾಂಕವನ್ನೂ ಎಲ್ಲರೂ ನೆನಪಿಸುತ್ತಾರೆ. ಕಾರಣ ಈ ದಿನ ಪವಿತ್ರ ದಿನ. ದಿವ್ಯತೆಯ ಪರಿಪೂರ್ಣ ದಿನವಾಗಿದೆ. ಇದು ಸಾಮಾನ್ಯ ಸಮಯವಲ್ಲ. ಕಾಲಚಕ್ರದಲ್ಲಿ ಅಚ್ಚಳಿಯದೆ ಬರೆದ ದಿನವಾಗಿದೆ. ಎಲ್ಲಿ ಶ್ರೀರಾಮನ ಇದ್ದಾನೋ ಅಲ್ಲಿ ಹನುಮಾನ್ ಭಕ್ತಿ ಇದ್ದೇ ಇರುತ್ತೆ. ಸೀತಾ ಮಾತಾ, ಲಕ್ಷ್ಣಣ ಸೇರಿದಂತೆ ಎಲ್ಲಾ ದೈವಿಯ ಗಮಸಂಭೂತರಿಗೆ ನಮನ ಸಲ್ಲಿಸುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ಪ್ರಭುಶ್ರೀರಾಮನಲ್ಲಿ ಕ್ಷಮೆಯನ್ನೂ ಕೇಳುತ್ತೇನೆ. ಇಷ್ಟು ವರ್ಷ ಶ್ರೀರಾಮನ ಸೇವೆಯಲ್ಲಿ ನಮ್ಮಿಂದ ಏನಾದರೂ ಕಡಿಮೆಯಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಮೋದಿ ಹೇಳಿದ್ದಾರೆ. ಇಂದು ಪ್ರಭು ಶ್ರೀರಾಮನ ನೋಡಿ ಆಯೋಧ್ಯೆ ಹಾಗೂ ಇಡೀ ದೇಶದ ನಾಗರೀಕರು ಸಂಸತದಲ್ಲಿ ತೇಲಾಡಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಶ್ರೀರಾಮ 14 ವರ್ಷ ವನವಾಸ ಮಾಡಿದ್ದರು. ಆದರೆ ಶ್ರೀರಾಮನನ್ನು ಭವ್ಯ ರಾಮ ಮಂದಿರದಲ್ಲಿ ವಿರಾಜಮಾನಗೊಳಿಸಲು ಶತ ಶತಮಾನಗಳ ಕಾಲ ನಮ್ಮ ತಲೆ ತಲೆಮಾರುಗಳ ಹೋರಾಟ ನಡೆಸಿದೆ.
ಸಂವಿಧಾನ ಅಸ್ತಿತ್ವಕ್ಕೆ ಬಂದ ಬಳಿಕವೂ ಶ್ರೀರಾಮನ ಹೋರಾಟ ನಡೆಯುತ್ತಲೇ ಇತ್ತು. ಶ್ರೀರಾನಮ ಅಸ್ಥಿತ್ವವನ್ನೇ ಪ್ರಶ್ನೆ ಮಾಡಲಾಗಿತ್ತು. ಕಾನೂನು ಹೋರಾಟ ನಡೆದಿತ್ತು. ಈ ವೇಳೆ ನ್ಯಾಯಪಾಲಿಕೆಗೆ ಗೌರವ ಸೂಚಿಸುತ್ತಿದ್ದೇನೆ. ಪ್ರತಿ ಮನೆಯಲ್ಲಿ ದೀಪಾವಳಿ ಸಡಗ ಮನೆ ಮಾಡಿದೆ ಎಂದು ಮೋದಿ ಹೇಳಿದ್ದಾರೆ. ರಾಮಸೇತು ಆರಂಭ ಬಿಂದುವಾಗಿ ಅರಿಚಲ್ ಮುನೈಗೆ ಭೇಟಿ ನೀಡಿದ್ದೆ. ಅಲ್ಲಿ ನಿಂತು ಶ್ರೀರಾಮನ ಹೆಜ್ಜೆಗಳ ಅನುಭೂತಿ ಮಾಡಲು ಪ್ರಯತ್ನ ಮಾಡಿದ್ದೇನೆ. ಕಳೆದ 11 ದಿನಗಳಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಭಾಷೆಗಳಲ್ಲಿ ರಾಮಕಥಾ ಕೇಳುವ ಸೌಭಾಗ್ಯ ಸಿಕ್ಕಿತ್ತು.
ರಾಮ ಭಕ್ತರು, ರಾಜ ಮಹಾರಾಜರು, ಸಾಧು ಸಂತರು, ಕರಸೇವಕರು, ಜೊತೆ ಕೋಟಿ ಕೋಟಿ ಹಿಂದೂಗಳು ಹೋರಾಟಕ್ಕೆ ನಾನು ಚಿರಋಣಿಯಾಗಿದ್ದೇನೆ. ಇತಿಹಾಸ, ನಾಗರೀಕತೆಯನ್ನು ಪುನರುತ್ಥಾನಗೊಳಿಸಲು ಹೊರಟ ದೇಶಗಳಿಗೆ ಅತ್ಯಂತ ಕಠಿಣ ಸವಾಲು ಎದುರಾಗಿದೆ. ಭಾರತ ಕೂಡ ಹಲವು ಸವಾಲು ಎದುರಿಸಿದೆ. ಇಂದು ಭಾರತ ಭವ್ಯ ರಾಮ ಮಂದಿರ ನಿರ್ಮಿಸಿ ಉತ್ತಮ ಭವಿಷ್ಯಕ್ಕೆ ನಾಂದಿ ಹಾಡಿದೆ. ರಾಮ ಮಂದಿರ ಧೈರ್ಯ, ಶಾಂತಿ, ಸಮನ್ವಯದ ಪ್ರತೀಕವಾಗಿದೆ.
ರಾಮ ವಿವಾದವಲ್ಲ, ರಾಮ ಭಕ್ತಿಯ ಸಂಕೇತ, ರಾಮ ಎಲ್ಲರಿಗೂ ಸೇರಿದ ಆದರ್ಶ ಪುರುಷ. ಇದು ಕೇವಲ ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠೆ, ಭಾರತೀಯ ಸಂಸ್ಕೃತಿಯ ಪ್ರತೀಕದ ಪ್ರಾಣಪ್ರತಿಷ್ಠೆಯಾಗಿದೆ. ಇದು ಕೇವಲ ದೇವ ಮಂದಿರ ಮಾತ್ರವಲ್ಲ, ಭಾರತದ ದೃಷ್ಟಿ, ಭಾರತದ ದರ್ಶನದ ಮಂದಿರವಾಗಿದೆ. ಇದು ರಾಷ್ಟ್ರೀಯ ಕೀರ್ತನೆಯ ಮಂದಿರವಾಗಿದೆ. ರಾಮ ಭಾರತದ ವಿಚಾರ, ರಾಮ ಭಾರತ ವಿಕಾಸ, ರಾಮ ಭಾರತದ ಚೇತನ, ರಾಮ ಭಾರತದ ಚಿಂತನೆ, ರಾಮ ಭಾರತದ ಪ್ರತಾಪ, ರಾಮ ಭಾರತದ ಪ್ರಭಾವ, ರಾಮ ನೀತಿಯೂ ಹೌದು, ನಿರಂತರತೆ ಹೌದು, ರಾಮ ವ್ಯಾಪಕವೂ ಹೌದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.