ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸ್ವಸ್ತಿ ಜೈನ್ ಮೂಡುಬಿದಿರೆ ಇವರು 625ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಸ್ವಸ್ತಿ ಜೈನ್ ಮೂಡುಬಿದರೆಯ ರೋಟರಿ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ. ಹಿಂದಿ ಬದಲು ಈಕೆ ಸಂಸ್ಕೃತವನ್ನು ಅಭ್ಯಾಸ ಮಾಡಿದ್ದಾರೆ.
ಈಕೆ ಮೂಡುಬಿದಿರೆಯ ಸಂತೋಷ್ ಜೈನ್ , ಸೌಜನ್ಯ ಜೈನ್ ದಂಪತಿಗಳ ಪುತ್ರಿ. ಚಿತ್ರಕಲೆ, ನೃತ್ಯ ,ಕ್ರೀಡೆ ,ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿರುವ ಬಹುಮುಖ ಪ್ರತಿಭೆ ಯಾಗಿರುತ್ತಾರೆ.