ಪ್ರಾತಿನಿಧಿಕ ಚಿತ್ರ
ಎಸ್ಎಸ್ಎಲ್ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಸಂಬಂಧ ಖಾಸಗಿ ಶಾಲೆಯ ಎಂಟು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ
ರಾಮನಗರ ಜಿಲ್ಲೆಯ ಮಾಗಡಿಯ ಕೆಂಪೇಗೌಡ ಪ್ರೌಢಶಾಲೆಯ ಕ್ಲರ್ಕ್ ರಂಗೇಗೌಡ, ಪ್ರಾಂಶುಪಾಲ ಶ್ರೀನಿವಾಸ್, ರಂಗನಾಥ ಶಾಲೆಯ ಕೃಷ್ಣಮೂರ್ತಿ ಸೇರಿ ಎಂಟು ಜನರನ್ನು ವಶಕ್ಕೆ ಪಡೆದಿರುವುದಾಗಿ ರಾಮನಗರ ಜಿಲ್ಲಾ ಎಸ್ಪಿ ಸಂತೋಷ್ ಬಾಬು ಹೇಳಿದ್ದಾರೆ.
ಎಸ್ಎಸ್ಎಲ್ಸಿ ಪರೀಕ್ಷೆಯ ವಿಜ್ಞಾನ ಪತ್ರಿಕೆ ಸೋರಿಕೆ ಆಗಿತ್ತು. ಬೆಳಗ್ಗೆ 10.30ಕ್ಕೆ ಪರೀಕ್ಷೆ ಆರಂಭ ಆಗುವ ವೇಳೆ ಆ ಪ್ರಶ್ನೆಪತ್ರಿಕೆಯನ್ನು ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಇರುವ ವಾಟ್ಸಾಪ್ ಗ್ರೂಪ್ನಲ್ಲಿ ರಂಗೇಗೌಡ ಹಂಚಿಕೊಂಡಿದ್ದ.
ಈತ ಪ್ರಶ್ನೆಪತ್ರಿಕೆಯನ್ನು ವಾಟ್ಸಾಪ್ನಲ್ಲಿ ಹಂಚಿಕೊಂಡಿದ್ದರ ಬಗ್ಗೆ ಮಾಹಿತಿ ಇದ್ದವರನ್ನು ಈತ ಹಣ ನೀಡಿ ಬಾಯಿ ಮುಚ್ಚಿಸಿದ್ದ. ಪರೀಕ್ಷೆ ಮುಗಿದ ತಿಂಗಳಾದ ಬಳಿಕ ಇನ್ಸ್ಪೆಕ್ಟರ್ ಅವರಿಗೆ ಈ ವದಂತಿ ಬಗ್ಗೆ ತಿಳಿದು ಸೋಮವಾರ ರಂಗೇಗೌಡನನ್ನು ಸಂದೇಹದಿಂದ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬಯಲಾಗಿದೆ.
ಈ ಹಿನ್ನೆಲೆಯಲ್ಲಿ ಡಿಡಿಪಿಐ ರಾತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕೆಂಪೇಗೌಡ ಪ್ರೌಢಶಾಲೆಯಲ್ಲಿ ಪರೀಕ್ಷಾ ಕೇಂದ್ರ ಇರಲಿಲ್ಲ, ಆದರೆ ರಂಗನಾಥ ಶಾಲೆಯುಲ್ಲಿ ಪರೀಕ್ಷಾ ಕೇಂದ್ರ ಇತ್ತು.
ಪ್ರಕರಣದಲ್ಲಿ ಪತ್ರಕರ್ತ ಎಂದು ಹೇಳಿಕೊಳ್ಳುತ್ತಿದ್ದ ಓರ್ವನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಮಕ್ಕಳಿಗೆ ಸಹಾಯ ಮಾಡಲು ಈ ರೀತಿ ಮಾಡಿದ್ದೇವೆ ಕೆಲವರು ಹೇಳಿದ್ದಾರೆ ಎಂದು ಎಸ್ಪಿ ಸಂತೋಷ್ಬಾಬು ಮಾಹಿತಿ ನೀಡಿದ್ದಾರೆ.