ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ನಡೆಯುವುದು ದೃಢವಾಗಿದೆ. ಎಂಟು ವಾರಗಳ ಒಳಗಾಗಿ ವಾರ್ಡ್ ಗಳ ಮರು ವಿಂಗಡಣೆ ಮತ್ತು ವಾರ್ಡ್ ಗಳಲ್ಲಿ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಹಂಚಿಕೆ ಸಂಬAಧ ಅಧಿಸೂಚನೆ ಹೊರಡಿಸುವಂತೆ ಕರ್ನಾಟಕ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.
ವಾರ್ಡ್ ವಿಂಗಡಣೆ ಮತ್ತು ಮೀಸಲಾತಿ ಸಂಬAಧ ಅಧಿಸೂಚನೆ ಹೊರಡಿಸುವುದಾಗಿ ಸರ್ಕಾರ ನೀಡಿದ ಅಭಿಪ್ರಾಯವನ್ನು ಮಾನ್ಯ ಮಾಡಿದ ಸುಪ್ರೀಂಕೋರ್ಟ್ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸುವAತೆಯೂ ರಾಜ್ಯ ಚುನಾವಣಾ ಆಯೋಗಕ್ಕೆ ಸೂಚಿಸಿದೆ.
ವಾರ್ಡ್ ಗಳ ವಿಂಗಡಣೆ ಸಂಬAಧ ಅಧಿಸೂಚನೆ ಪ್ರಕಟವಾದ ಒಂದು ವಾರದೊಳಗೆ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸುವAತೆ ಆಯೋಗಕ್ಕೆ ಸೂಚಿಸಿದೆ.
`ವಾರ್ಡ್ ವಿಂಗಡಣೆ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಆ ಸಂಬAಧ ಅಧಿಸೂಚನೆ ಹೊರಡಿಸುವುದಾಗಿ ಸರ್ಕಾರ ಹೇಳಿದೆ. ಹೀಗಾಗಿ 8 ವಾರದೊಳಗೆ ವಾರ್ಡ್ ವಿಂಗಡಣೆ ಮತ್ತು ಮೀಸಲಾತಿ ಸಂಬAಧ ಅಧಿಸೂಚನೆ ಪ್ರಕಟ ಆಗ್ಬೇಕು. ಆ ಅಧಿಸೂಚನೆ ಪ್ರಕಟವಾದ ಒಂದು ವಾರದೊಳಗೆ ವಾರ್ಡ್ ವಿಂಗಡಣೆ ಮತ್ತು ಮೀಸಲಾತಿ ಆಯೋಗದ ಶಿಫಾರಸ್ಸಿನಂತೆ ಚುನಾವಣೆ ನಡೆಸಬೇಕು’ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್, ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಸೂಚಿಸಿದೆ.
ಸುಪ್ರೀಂಕೋರ್ಟ್ ಆದೇಶಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ 8 ವಾರದೊಳಗೆ ಬಿಬಿಎಂಪಿಗೆ ಚುನಾವಣೆ ನಡೆಸುವುದಾಗಿ ಹೇಳಿದ್ದಾರೆ.