ADVERTISEMENT
ದೇಶದ ಅತೀ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾಲಿ ಹುದ್ದೆಗಳ ಭರ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಬರೋಬ್ಬರೀ 13,735 ಕಿರಿಯ ಜೊತೆಗಾರರು (ಜೂನಿಯರ್ ಅಸೋಸಿಯೇಟ್ಸ್ ಕಸ್ಟಮರ್ ಸಪೋರ್ಟ್ ಆಂಡ್ ಸೇಲ್) ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ.
ಈ 13,735 ಹುದ್ದೆಗಳ ಪೈಕಿ 2118 ಹುದ್ದೆಗಳನ್ನು ಎಸ್ಸಿ ಸಮುದಾಯದ ಅಭ್ಯರ್ಥಿಗಳಿಗೆ, 1385 ಹುದ್ದೆಗಳನ್ನು ಎಸ್ಟಿ ಸಮುದಾಯಕ್ಕೆ, 3001 ಹುದ್ದೆಗಳನ್ನು ಇತರೆ ಹಿಂದುಳಿದ ಸಮುದಾಯಕ್ಕೆ, 1361 ಹುದ್ದೆಗಳನ್ನು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಮತ್ತು 5870 ಹುದ್ದೆಗಳನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.
ಬೆಂಗಳೂರು ವೃತ್ತದಲ್ಲಿ 50 ಹುದ್ದೆಗಳ ಭರ್ತಿ ಮಾಡಿಕೊಳ್ಳಲಾಗುತ್ತಿದೆ.
ವಿದ್ಯಾಹತೆ: ಯಾವುದಾದರೂ ಪದವಿ ಪಡೆದಿರಬೇಕು
ಕನಿಷ್ಢ ವಯೋಮಿತಿ: 20 ವರ್ಷ ತುಂಬಿರಬೇಕು
ಅರ್ಜಿ ಸಲ್ಲಿಕೆ ಆರಂಭ: ಡಿಸೆಂಬರ್ 17, ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿಗೆ ಕೊನೆಯ ದಿನ: ಜನವರಿ 7, 2025
ಪರೀಕ್ಷಾ ಶುಲ್ಕ: ಎಸ್ಸಿ/ಎಸ್ಟಿ/ವಿಕಲಚೇನತರಿಗೆ ಪರೀಕ್ಷಾ ಶುಲ್ಕ ಇರುವುದಿಲ್ಲ. ಒಬಿಸಿ/ಸಾಮಾನ್ಯ ವರ್ಗ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರು 750 ರೂ. ಶುಲ್ಕ ಪಾವತಿ ಮಾಡಬೇಕು
ಪರೀಕ್ಷೆ ಪ್ರಕ್ರಿಯೆ: 2 ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ. 1) ಮೊದಲ ಪರೀಕ್ಷೆ – 100 ಅಂಕಗಳಿಗೆ 2) ಮುಖ್ಯ ಪರೀಕ್ಷೆ – 200 ಅಂಕಗಳಿಗೆ
ಕರ್ನಾಟಕದಲ್ಲಿ ಕನ್ನಡ, ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಪರೀಕ್ಷೆ ನಡೆಯಲಿದೆ.
ಕರ್ನಾಟಕದಲ್ಲಿ ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳು: ಬೆಂಗಳೂರು, ಬೆಳಗಾವಿ, ಕಲ್ಬುರ್ಗಿ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಮೈಸೂರು, ಶಿವಮೊಗ್ಗ, ಉಡುಪಿ
ADVERTISEMENT