ರಾಜ್ಯದಲ್ಲಿ ಮುಂದಿನ ವಿಧಾನಸಭೆಗೆ ರಾಜ್ಯ ರೈತ ಸಂಘ ಹಾಗೂ ಆಮ್ ಆದ್ಮಿ ಪಕ್ಷ ಚುನಾವಣಾ ಪೂರ್ವ ಮೈತ್ರಿ ಘೋಷಿಸಿವೆ.
ಇಂದು ಗುರುವಾರ ಬೆಂಗಳೂರಿನಲ್ಲಿ ರಾಜ್ಯ ರೈತ ಸಂಘ ಬೃಹತ್ ಸಮಾವೇಶ ಮಾಡಿದೆ. ಈ ಸಮಾವೇಶಕ್ಕೆ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಚಾಲನೆ ನೀಡಿದ್ದಾರೆ.
ಏ.21 ರಂದು ರೈತರ ಬೃಹತ್ ಸಮಾವೇಶ ಮಾಡಿ ನೂತನ ಪಕ್ಷ ಘೋಷಣೆ ಮಾಡುತ್ತೇವೆ ಎಂದು ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಅವರು ಈ ಮೊದಲೇ ಹೇಳಿದ್ದರು.
ಮುಂದಿನ ಬಾರಿ ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷ ಮತ್ತು ರೈತ ಸಂಘದ ಸರ್ಕಾರ ಬರಬೇಕು ಎಂಬ ಘೋಷಣೆಯನ್ನು ರೈತ ಸಂಘದ ಮುಖಂಡರು ಘೋಷಣೆ ಮೊಳಗಿಸಿದ್ದಾರೆ. ಇದು ಬಿಳಿ ಬಣ್ಣಗಳ ಸಮ್ಮಿಲನ ಎಂದು ರೈತ ಮುಖಂಡರು ಹೇಳಿದ್ದಾರೆ
ಈ ಮೂಲಕ ಕರ್ನಾಟಕದಲ್ಲಿ 2023 ರ ರಲ್ಲಿ ನಡೆಯಲಿರುವ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಆಮ್ ಆದ್ಮಿ ಪಕ್ಷ ಪಂಜಾಬ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬೆನ್ನಲ್ಲೇ, ಹುರುಪನ್ನು ಹೆಚ್ಚಿಸಿಕೊಂಡು ದೇಶಾದ್ಯಂತ ತನ್ನ ಪಕ್ಷವನ್ನು ವಿಸ್ತರಿಸುತ್ತಿದೆ. ಆ ನಿಟ್ಟಿನಲ್ಲಿ ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಈಗಾಗಲೇ ಭಾಸ್ಕರ್ ರಾವ್ ಹಾಗೂ ಕೆ.ಮಥಾಯಿಯಂತಹ ನಿವೃತ್ತ ಅಧಿಕಾರಿಗಳು ಆಮ್ ಆದ್ಮಿ ಪಕ್ಷದತ್ತ ಮುಖ ಮಾಡಿದ್ದಾರೆ.