ADVERTISEMENT
ಸತತ ನಾಲ್ಕನೇ ದಿನವೂ ಷೇರು ಮಾರುಕಟ್ಟೆ ಭಾರೀ ಕುಸಿತ ಕಂಡಿದೆ.
ಮುಂಬೈ ಷೇರು ಪೇಟೆ ಸೂಚ್ಯಂಕ 860 ಅಂಕಗಳಷ್ಟು ಕುಸಿತ ಕಂಡಿದೆ. ನಿಫ್ಟಿ 230 ಅಂಕಗಳಷ್ಟು ಇಳಿಕೆಯಾಗಿದೆ. ನಿಫ್ಟಿ ಮಿಡ್ಕ್ಯಾಪ್ ಸೂಚ್ಯಂಕ 370 ಅಂಕಗಳಷ್ಟು ಇಳಿಕೆಯಾಗಿದೆ.
ಇನ್ನು ನಿಫ್ಟಿ ಸ್ಮಾಲ್ಕ್ಯಾಪ್ ಸೂಚ್ಯಂಕ 60 ಅಂಕಗಳಷ್ಟು ಕುಸಿತವಾಗಿದೆ. ನಿಫ್ಟಿ ಬ್ಯಾಂಕ್ 600 ಅಂಕಗಳಷ್ಟು ಇಳಿಕೆಯಾಗಿದೆ.
ಸೋಮವಾರದಿಂದ ನಿನ್ನೆಯವರೆಗೆ ಷೇರು ಮಾರುಕಟ್ಟೆ 2 ಸಾವಿರ ಅಂಕಗಳಷ್ಟು ಇಳಿಕೆಯಾಗಿತ್ತು. ಈ ಮೂಲಕ ಕೇವಲ 3 ದಿನದಲ್ಲೇ ಷೇರುದಾರರಿಗೆ 6 ಲಕ್ಷ ಕೋಟಿ ರೂಪಾಯಿಯಷ್ಟು ನಷ್ಟವಾಗಿತ್ತು.
ನಾಲ್ಕನೇ ದಿನವೂ ಷೇರು ಮಾರುಕಟ್ಟೆಯಲ್ಲಿ ಕುಸಿತ ಮುಂದುವರೆದಿದೆ.
ADVERTISEMENT