ನವದೆಹಲಿ: ಭಾರತ್ ಜೋಡೋ ನ್ಯಾಯ ಯಾತ್ರೆ ಅಸ್ಸಾಂ ಮೂಲಕ ಹಾದುಹೋಗುತ್ತಿದ್ದಾಗ ದುಷ್ಕರ್ಮಿಗಳು ಯಾತ್ರೆಯ ಪೋಸ್ಟರ್ ಗಳು ಮತ್ತು ಬ್ಯಾನರ್ ಗಳನ್ನು ಹರಿದುಹಾಕಿದ ಘಟನೆ ಲಖಿಂಪುರ ಪಟ್ಟಣದಲ್ಲಿ ಶನಿವಾರ(ಜ.೨೦) ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ನಂತರ ಇಂದು ಯಾತ್ರೆ ನಡೆಯುವ ಸಂದರ್ಭದಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ವಾಹನಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.
ಕಾಂಗ್ರೆಸ್ 54 ಸೆಕೆಂಡುಗಳ ವೀಡಿಯೊವನ್ನು ಬಿಡುಗಡೆ ಮಾಡಿದ್ದು, ಜನರು “ಜೈ ಶ್ರೀ ರಾಮ್” ಎಂದು ಘೋಷಣೆ ಕೂಗಿ ಪೋಸ್ಟರ್ ಗಳನ್ನು ಹರಿದುಹಾಕುವುದನ್ನು ಕಾಣಬಹುದು ಎಂದು ಬರೆದುಕೊಂಡಿದ್ದಾರೆ. ರಾಹುಲ್ ಗಾಂಧಿ ಮತ್ತು ಇತರ ಇಬ್ಬರು ಕಾಂಗ್ರೆಸ್ ನಾಯಕರ ಭಾವಚಿತ್ರವಿರುವ ಹೋರ್ಡಿಂಗ್ ಅನ್ನು ಇನ್ನೊಬ್ಬ ವ್ಯಕ್ತಿ ಕೆಳಗೆ ಎಳೆಯುತ್ತಿರುವುದನ್ನು ಈ ಕ್ಲಿಪ್ ನಲ್ಲಿ ತೋರಿಸಲಾಗಿದೆ.
#DaroMatHimanta@RahulGandhi Ji's #BharatJodoNyayYatra drawing thousands of cheering people in Assam has made the @himantabiswa regime restless.
While CM is trying to detail the yatra by even threatening of arrests, his followers are tearing off posters & banners of the… pic.twitter.com/z37s0Os6CE
— Assam Congress (@INCAssam) January 20, 2024