ಭಜರಂಗದಳ (Bhajarangadal) ಕಾರ್ಯಕರ್ತರು ಪಬ್ (Pub)ಮೇಲೆ ದಾಳಿ ಮಾಡಿ ವಿದ್ಯಾರ್ಥಿಗಳ ವಿದಾಯಕೂಟಕ್ಕೆ ಅಡ್ಡಿ ಪಡಿಸಿದ್ದಾರೆ ಎನ್ನಲಾಗಿದೆ.
ಮಂಗಳೂರು ನಗರದ ಪಬ್ ಒಂದರಲ್ಲಿ ಸೋಮವಾರ ರಾತ್ರಿ ಕಾಲೇಜು ವಿದ್ಯಾರ್ಥಿಗಳು ಸಹಪಾಠಿಗಳ ಜೊತೆ ಸೇರಿ ವಿದಾಯಕೂಟ ಆಚರಿಸುತ್ತಿದ್ದರು. ಈ ಸಂದರ್ಭದಲ್ಲಿ ಭಜರಂಗದಳ(Bhajarangadal)ದ ಕಾರ್ಯಕರ್ತರು ಅಲ್ಲಿಗೆ ತೆರಳಿ ವಿದ್ಯಾರ್ಥಿಗಳ ಮೋಜುಮಸ್ತಿಗೆ ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ.
ಮಂಗಳೂರಿನ ಬಲ್ಮಠದ ರಿ-ಸೈಕಲ್ ದಿ ಲಾಂಜ್ ಪಬ್(Pub)ನಲ್ಲಿ ಪಾರ್ಟಿಗೆ ಭಜರಂಗದಳ(Bhajarangadal)ದ ಕಾರ್ಯಕರ್ತರು ಅಡ್ಡಿಪಡಿಸಿದ್ದು, ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಂದ ಪಾರ್ಟಿ ನಡೆಯುತ್ತಿತ್ತು. ಕುಡಿದು ಯುವಕ-ಯುವತಿಯರಿಂದ ಮೋಜು ಮಸ್ತಿ ಆರೋಪಿಸಿ ಭಜರಂಗದಳ(Bhajarangadal) ತಡೆ ಒಡ್ಡಿದೆ. ಕಾಲೇಜು ಫೇರ್ ವೆಲ್ ನೆಪದಲ್ಲಿ ಪಬ್ನಲ್ಲಿ ಪಾರ್ಟಿ ನಡೆಯುತ್ತಿತ್ತು ಎನ್ನಲಾಗಿದೆ.
ಪಬ್(Pub) ಒಳ ಹೊಕ್ಕು ಪಾರ್ಟಿ ನಿಲ್ಲಿಸಿದ ಬಜರಂಗದಳದ ಕಾರ್ಯಕರ್ತರು, ಪಾರ್ಟಿ ನಿಲ್ಲಿಸುವಂತೆ ಸೂಚಿಸಿ ಬೈದು ವಿದ್ಯಾರ್ಥಿಗಳನ್ನ ಹೊರ ಕಳುಹಿಸಿದ್ದಾರೆ. ಬಳಿಕ ಮಧ್ಯ ಪ್ರವೇಶಿಸಿ ಭಜರಂಗದಳದ ಕಾರ್ಯಕರ್ತರನ್ನ ಪೊಲೀಸರು ಚದುರಿಸಿದ್ದು, ಸದ್ಯ ಪಾರ್ಟಿ ಅರ್ಧದಲ್ಲೇ ನಿಲ್ಲಿಸಿ ಕಾಲೇಜು ವಿದ್ಯಾರ್ಥಿಗಳು ಕಾಲ್ಕಿತ್ತಿದ್ದಾರೆ.
ಪಾರ್ಟಿ ಆಯೋಜಿಸಿದ್ದ ವಿದ್ಯಾರ್ಥಿಗಳು ಕೆಲ ದಿನಗಳ ಹಿಂದೆಯಷ್ಟೇ ವೈರಲ್ ಆಗಿದ್ದ ಲಿಪ್ ಲಾಕ್ ವಿಡಿಯೋ ಮೂಲಕ ಸುದ್ದಿಯಾಗಿದ್ದ ಕಾಲೇಜಿನ ವಿದ್ಯಾರ್ಥಿಗಳು ಎನ್ನಲಾಗಿದೆ. ಪದವಿ ವಿದ್ಯಾರ್ಥಿಗಳಿಂದ ಪಬ್ನಲ್ಲಿ ಮೋಜು ಮಸ್ತಿ ಹಿನ್ನೆಲೆ ತಡೆ ಒಡ್ಡಲಾಗಿದೆ.