ಇತ್ತೀಚಿಗೆ ಜಗತ್ತಿನಲ್ಲಿ ಎಲ್ಲಿ ನೋಡಿದರೂ ಪ್ರವಾಹ ಸನ್ನಿವೇಶಗಳು ಕಂಡುಬರುತ್ತಿದೆ. ಇದೀಗ ಪೂರ್ವ ಚೀನಾ ಸಮುದ್ರದಲ್ಲಿ (Western Pacific Ocean) ಏರ್ಪಟ್ಟಿರುವ ಉಷ್ಣಮಂಡಲ ಸೂಪರ್ ಟೈಫೂನ್ (Super Typhoon) ಹಿನಮ್ಮರ್ (Hinammor) ಶರ ವೇಗದಲ್ಲಿ ಜಪಾನ್(Japan), ಚೀನಾ(China), ಫಿಲಿಫೈನ್ಸ್ (Philippines)ತೀರಗಳತ್ತ ಚಲಿಸುತ್ತಿದೆ.
ಹಿನಮ್ಮರ್ ಹೆಸರಿನಿಂದ ಕರೆಯಲಾಗುತ್ತಿರುವ ಚಂಡಮಾರುತದ ಪರಿಣಾಮ ಗಂಟೆಗೆ 257 ಕಿಲೋಮೀಟರ್ ವೇಗದಲ್ಲಿ ಪ್ರಚಂಡ ಗಾಳಿ ಬೀಸುತ್ತಿದೆ. ಸೂಪರ್ ಟೈಫೂನ್ ಪ್ರಭಾವದಿಂದ ಜಪಾನ್‌ನ ದಕ್ಷಿಣ ದ್ವೀಪಗಳಿಗೆ ಹೆಚ್ಚು ಅಪಾಯ ಎನ್ನಲಾಗುತ್ತಿದೆ. ಇದನ್ನು 2022ರ ಜಗತ್ತಿನ ಅತ್ಯಂತ ಅಪಾಯಕಾರಿ ಚಂಡಮಾರುತ ಎಂದು ತಜ್ಞರು ಅಂದಾಜಿಸಿದ್ದಾರೆ.
ಸದ್ಯ ಜಪಾನ್ ದೇಶದ ಒಕಿನಾವ(Okinawa Islands )ದಿಂದ ಸುಮಾರು 230 ಕಿಲೋಮೀಟರ್ ದೂರದಲ್ಲಿ ಹಿನಮ್ಮರ್ ಸೂಪರ್ ಟೈಫೂನ್ ಕೇಂದ್ರೀಕೃತವಾಗಿದೆ ಎಂದು ಹಾಂಕಾಂಗ್ ಹವಾಮಾನ ಇಲಾಖೆ ಹೇಳಿದೆ.
ಇದು ಪಶ್ಚಿಮ ನೈರುತ್ಯ ಪ್ರಾಂತ್ಯದ ಕಡೆ ಗಂಟೆಗೆ 22ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ. ಇದರ ತೀವ್ರತೆಗೆ ಮೊದಲು ರ‍್ಯೂಕ್ಯೂ ದ್ವೀಪ ಬಲಿ ಆಗಬಹುದು ಎಂದು ಹೇಳಲಾಗುತ್ತಿದೆ
ಸೂಪರ್ ಟೈಫೂನ್ ಕಾರಣ ಗಂಟೆಗೆ 257ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಒಮ್ಮೊಮ್ಮೆ 313 ಕಿಲೋಮೀಟರ್ ವೇಗದಲ್ಲೂ ಗಾಳಿ ಬೀಸುತ್ತಿದೆ. ಈ ಸಮಯದಲ್ಲಿ ಸಮುದ್ರದಲ್ಲಿ 15 ಮೀಟರ್ ಎತ್ತರದವರೆಗೂ ಅಲೆಗಳು ಏಳುತ್ತಿವೆ.
ಇದು ಈ ವರ್ಷದ ಅತ್ಯಂತ ಬಲಿಷ್ಟವಾದ ತೂಫಾನ್ ಎಂದು ಜಪಾನ್ ವಾತಾವರಣ ಕೇಂದ್ರ ಹೇಳಿದೆ. ಆದರೆ, ಈ ಸೂಪರ್ ಟೈಫೂನ್ ತೀರದ ಸನಿಹಕ್ಕೆ ಬಂದಂತೆಲ್ಲಾ ಗಾಳಿಯ ವೇಗ ಕ್ಷೀಣಿಸಬಹುದು ಎಂದು ಅಮೆರಿಕಾದ ಜೈಂಟ್ ಟೈಫೂನ್ ವಾರ್ನಿಂಗ್ ಸೆಂಟರ್ (JTWC)ಅಂದಾಜು ಮಾಡಿದೆ.
ಮತ್ತೊಂದು ಕಡೆ, ಇದು ಚಂಡ ಮಾರುತಗಳ ಸೀಜನ್ ಆದರೂ, ಅಟ್ಲಾ0ಟಿಕ್ ಮಹಾ ಸಾಗರ (Atlantic Ocean)ಪ್ರಶಾಂತವಾಗಿರೋದು ಮಹಾ ಅಚ್ಚರಿಗೆ ಕಾರಣವಾಗಿದೆ.