No Result
View All Result
ದಲಿತ ಉದ್ಯಮಿಗಳ ಸಮಸ್ಯೆಗಳ ಇತ್ಯರ್ಥಕ್ಕೆ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಉನ್ನತ ಮಟ್ಟದ ಸಮಿತಿ ರಚಿಸಿದೆ.
ಬೆಂಗಳೂರಿನ ಖನಿಜ ಭವನದಲ್ಲಿ ದಲಿತ ಉದ್ಯಮಿಗಳೊಂದಿಗೆ ಬೃಹತ್ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರು ಮಾತುಕತೆ ನಡೆಸಿದರು.
ಕಳೆದ ಕೆಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ದಲಿತ ಉದ್ಯಮಿಗಳ ಹಲವು ಸಮಸ್ಯೆಗಳನ್ನು, ಬೇಡಿಕೆಗಳನ್ನು ಪರಿಹರಿಸಲು ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಸೆಲ್ವಕುಮಾರ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗುತ್ತದೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ರಾಜ್ಯದ ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ದಿಮೆದಾರರಿಗೆ ಶೇಕಡ 24.10ರಷ್ಟು ಕೈಗಾರಿಕಾ ನಿವೇಶನಗಳನ್ನು ಹಂಚಲು ಸರಕಾರ ಬದ್ಧವಾಗಿದೆ. ವಿವಿಧ ಕೈಗಾರಿಕಾ ಪ್ರದೇಶಗಳಲ್ಲಿ ಇನ್ನೂ 391 ಎಕರೆಯಷ್ಟು ಜಾಗವನ್ನು ಪರಿಶಿಷ್ಟರಿಗೆ ಹಂಚುವುದು ಬಾಕಿ ಇದ್ದು, ಆದಷ್ಟು ಬೇಗ ಹಂಚಿಕೆ ಮಾಡಲಾಗುವುದು.
ಕೋವಿಡ್ ಪೂರ್ವದಲ್ಲಿ ಹಂಚಿಕೆಯಾಗಿರುವ ಫಲಾನುಭವಿಗಳಿಗೆ ಯೋಜನೆ ಜಾರಿ ಮತ್ತು ಹಣ ಪಾವತಿಗೆ ಈ ಹಿಂದೆ ಒಂದು ವರ್ಷ ನೀಡಿದ್ದ ವಿನಾಯಿತಿಯನ್ನು ಉದ್ದಿಮೆದಾರರ ಮನವಿ ಮೇರೆಗೆ ಎರಡು ವರ್ಷಗಳ ವಿನಾಯಿತಿ ನೀಡುವುದು ಸೇರಿದಂತೆ ಬಹುತೇಕ ಎಲ್ಲ ಬೇಡಿಕೆ ಇತ್ಯರ್ಥ ಪಡಿಸಲಾಗುವುದು.
ಭರವಸೆಗಳಿಂದ ತೃಪ್ತರಾದ ಉದ್ದಿಮೆದಾರರ ಸಂಘದ ಉಪಾಧ್ಯಕ್ಷರಾದ ಶ್ರೀನಿವಾಸನ್ ಹರ್ಷ ವ್ಯಕ್ತಪಡಿಸಿ, ಕೃತಜ್ಞತೆ ಅರ್ಪಿಸಿದರು. ನನಗೆ ದೊರೆತಿರುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದ ತೃಪ್ತಿ, ಸಂತಸ ನನ್ನದು ಎಂದು ಬೃಹತ್ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರು ಹೇಳಿದ್ದಾರೆ.
No Result
View All Result
error: Content is protected !!