ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಬೈಲಾ ತಿದ್ದುಪಡಿಗೆ (Amendment of BCCI Bylaws) ಸುಪ್ರೀಂಕೋರ್ಟ್ ಅವಕಾಶ ನೀಡಿದ್ದು, ಅ ಮೂಲಕ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಅವರು ತಮ್ಮ ಸ್ಥಾನದಲ್ಲಿ ಮತ್ತೊಂದು ಅವಧಿಗೆ ಮುಂದುವರೆಯಲು ಅವಕಾಶ ದೊರೆತಿದೆ.
ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಒಂದು ಅವಧಿ (3 ವರ್ಷ) ಪೂರ್ಣಗೊಳಿಸಿರುವ ಪದಾಧಿಕಾರಿಗಳಿಗೆ ಕೂಲಿಂಗ್ ಆಫ್ ಅವಧಿ ರದ್ದತಿ ಕುರಿತ ಬಿಸಿಸಿಐ ಮನವಿಯನ್ನು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಹಿಮಾ ಕೊಹ್ಲಿ ಅವರ ನ್ಯಾಯಪೀಠ ಸ್ವೀಕರಿಸಿದೆ.
ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಆರು ವರ್ಷ ಪೂರ್ಣಗೊಳಿಸಿರುವ ಪದಾಧಿಕಾರಿಗಳಿಗೆ ಮಾತ್ರ ಕೂಲಿಂಗ್ ಆಫ್ ಅವಧಿ ನಿಯಮ ಅನ್ವಯವಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಈ ಮೊದಲು ಮೂರು ವರ್ಷಗಳ ಅಧಿಕಾರ ಅವಧಿ ಮುಗಿದ ನಂತರ ಒಂದು ವರ್ಷದ ಕೂಲಿಂಗ್ ಆಫ್ ಅವಧಿ ಅನ್ವಯವಾಗುತ್ತಿತ್ತು. ಇದನ್ನೂ ಓದಿ : IPL: ಪ್ರತಿಯೊಂದು ಎಸೆತ, ಓವರ್‌ನಿಂದ ಬಿಸಿಸಿಐಗೆ ಎಷ್ಟು ಆದಾಯ ಬರುತ್ತೆ ಗೊತ್ತಾ..?
ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ನಲ್ಲಿ ಸತತ 2 ಅವಧಿಗಳನ್ನು ಪೂರ್ಣಗೊಳಿಸಿದ ನಂತರ ಕೂಲಿಂಗ್ ಆಫ್ ಜಾರಿಗೆ ಬರುತ್ತದೆ ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ತಿಳಿಸಿದೆ.
ಸುಪ್ರೀಂಕೋರ್ಟ್ನ ಈ ಆದೇಶದಿಂದ ಬಿಸಿಸಿಐನ ಕಾರ್ಯದರ್ಶಿಯಾಗಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಪುತ್ರ ಜಯ್ ಶಾ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿರುಮ್ಮಳರಾಗಿದ್ದಾರೆ. ಬಿಸಿಸಿಐ ಬೈಲಾ ತಿದ್ದುಪಡಿಯಾದಲ್ಲಿ (Amendment of BCCI Bylaws) ಯಾವುದೇ ಕೂಲಿಂಗ್ ಆಫ್ ಅವಧಿಯ ನಿಯಮವಿಲ್ಲದೇ ಅವರು ಮತ್ತೊಂದು ಅವಧಿಗೆ ತಮ್ಮ ತಮ್ಮ ಸ್ಥಾನದಲ್ಲಿ ಮುಂದುವರೆಯಲು ದಾರಿ ಸುಗಮವಾಗಿದೆ. ಇದನ್ನೂ ಓದಿ : 2023 ರಿಂದ ಮಹಿಳಾ ಐಪಿಎಲ್ ಪ್ರಾರಂಭಿಸಲು ಬಿಸಿಸಿಐ ಸಿದ್ಧತೆ