ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್ ಪೂತ್ ಸಾವಿನ ಪ್ರಕರಣದ ತನಿಖೆ ವಹಿಸಿಕೊಂಡಿರುವ ಸಿಬಿಐ ವಿರುದ್ಧ ನಟಿ ರಿಯಾ ಚಕ್ರವರ್ತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಕರಣದ ತನಿಖೆಯ ಭಾಗವಾಗಿ ನಟ ಸುಶಾಂತ್ ಗೆಳತಿಯಾಗಿದ್ದ ರಿಯಾ ಚಕ್ರವರ್ತಿ ವಿರುದ್ಧ ಲುಕ್ ಔಟ್ ನೋಟೀಸ್ ಹೊರಡಿಸಿತ್ತು.ಇದೀಗ ಪ್ರಕರಣ ನಡೆದು 3 ವರ್ಷಗಳೇ ಕಳೆದರೂ ಸಹ ಲುಕ್ಔಟ್ ನೋಟೀಸನ್ನು ಸಿಬಿಐ ರದ್ದುಗೊಳಿಸಿಲ್ಲ ಅಂತ ರಿಯಾ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇನ್ನು ಮಾಡೆಲ್ ಮತ್ತು ನಟಿ ರಿಯಾ ಚಕ್ರವರ್ತಿ ಕೆಲಸದ ನಿಮಿತ್ತ ವಿದೇಶಕ್ಕೆ ಪ್ರಯಾಣಿಸಬೇಕಿದೆ ಹೀಗಾಗಿ ಕೂಡಲೇ ಲುಕ್ ಔಟ್ ನೋಟೀಸನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿ ಅಂತ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ. ಇನ್ನು ಈ ಅರ್ಜಿಯನ್ನು ನ್ಯಾಯಾಲಯ ಡಿ.20ರಂದು ವಿಚಾರಣೆ ನಡೆಸಲಿದೆ.
ನಟ ಸುಶಾಂತ್ ಸಿಂಗ್ ರಾಜ್ ಪೂತ್ ಜೂ.14 2020ರಲ್ಲಿ ಬಾಂದ್ರಾದ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು. ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ರಿಯಾ ಮತ್ತು ಆಕೆಯ ಕುಟುಂಬಸ್ಥರ ವಿರುದ್ಧ ಬಿಹಾರದಲ್ಲಿ ದೂರು ದಾಖಲಾಗಿ ಸಿಬಿಐ ತನಿಖೆ ವಹಿಸಿಕೊಂಡಿತ್ತು.