SUV (Sports Utility Vehicle) ಸಂಬಂಧ ಸರಕು ಮತ್ತು ಸೇವಾ ತೆರಿಗೆ ಮೇಲಿನ ಸಮಿತಿ ಹೊಸ ವ್ಯಾಖ್ಯಾನವನ್ನು ನೀಡಿದೆ.
1,500 ccಗಿಂತ ಹೆಚ್ಚು ಇಂಜಿನ್ ಸಾಮರ್ಥ್ಯ ಇರುವ, 4000mmಗಿಂತ ಹೆಚ್ಚು ಉದ್ದ ಇರುವ ಮತ್ತು 170mmಗಿಂತ ಹೆಚ್ಚು ಗ್ರೌಂಡ್ ಕ್ಲಿಯರೆನ್ಸ್ ಇರುವ ವಾಹನಗಳನ್ನು SUV ಎಂದು ಪರಿಗಣಿಸಲಾಗುತ್ತದೆ ಎಂದು ಜಿಎಸ್ಟಿ ಸಮಿತಿ ಸಭೆ ಬಳಿಕ ಸಮಿತಿ ಮುಖ್ಯಸ್ಥರೂ ಆಗಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಈ ನಾಲ್ಕು ಗುಣಲಕ್ಷಣಗಳ ಆಧಾರದ ಮೇಲೆ ವಾಹನಗಳನ್ನು SUV ವಾಹನಗಳೆಂದು ಪರಿಗಣಿಸಲಾಗುತ್ತದೆ.
ಸದ್ಯ ಎಸ್ಯುವಿ ವಾಹನಗಳ ಮೇಲೆ 28ರಷ್ಟು ಜಿಎಸ್ಟಿ ತೆರಿಗೆ ಮತ್ತು ಶೇಕಡಾ 22ರಷ್ಟು ಸುಂಕವನ್ನು ವಿಧಿಸಲಾಗುತ್ತಿದೆ.
ಜಿಎಸ್ಟಿ ಸಮಿತಿ ಸಭೆಯಲ್ಲಿ ಎಸ್ಯುವಿ ವಾಹನದ ಬಗ್ಗೆ ನಿರ್ಧರಿಸಲಾದ ಈ ವ್ಯಾಖ್ಯಾನದಿಂದಾಗಿ ವಾಹನ ತಯಾರಿಕರಿಗೆ ಇದ್ದ ಗೊಂದಲ ಬಗೆಹರಿಯಲಿದೆ.
ADVERTISEMENT
ADVERTISEMENT