ಮಠದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮುರುಘಾ ಮಠದ ಸ್ವಾಮೀಜಿ ಜೈಲು ಪಾಲಾಗುತ್ತಿದ್ದಂತೆ ಅತ್ತ ಬೆಳಗಾವಿ ಜಿಲ್ಲೆಯಲ್ಲಿ ಸ್ವಾಮೀಜಿಯೊಬ್ಬರು ಸಿಡಿ ಭಯದಿಂದ ಮಠದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿರುವ ಗುರು ಮಡಿವಾಳೇಶ್ವರ ಮಠದ ಬಸವ ಸಿದ್ದಲಿಂಗ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡ ಸ್ವಾಮೀಜಿ.
ಪೊಲೀಸ್ ವರಿಷ್ಠಾಧಿಕಾರಿಗೆ ಒಂದು ಪುಟದ ಆತ್ಮಹತ್ಯೆ ಪ್ರಕರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ವಾಮೀಜಿ ಇಬ್ಬರು ಮಹಿಳೆಯರ ಹೆಸರನ್ನು ಉಲ್ಲೇಖಿಸಿದ್ದಾರೆ.
ಮನುಗುಂಡಿಯ ಸತ್ಯಕ್ಕ ಮತ್ತು ಗಂಗಾವತಿ ತಾಲೂಕಿನ ರುದ್ರಮ್ಮ ಹಾಸಿನಹಾಳ ಎಂಬ ಇಬ್ಬರು ಮಹಿಳೆಯರ ನಡುವೆ ಸಂಭಾಷಣೆ ನಡೆದಿದ್ದು, ಅವರಿಬ್ಬರ ಮೇಲೆ ಕಾನೂನು ಕ್ರಮಕೈಗೊಳ್ಳುವಂತೆ ಸ್ವಾಮೀಜಿ ಮರಣಪತ್ರದಲ್ಲಿ ಆಗ್ರಹಿಸಿದ್ದಾರೆ.
ಲಿಂಗಾಯತ ಸಮಾಜ ಬೀದಿಗಿಳಿದು ಹೋರಾಟ ಮಾಡುವ ಮೊದಲು ಕಾನೂನು ಕ್ರಮಕೈಗೊಳ್ಳಬೇಕೆಂದೂ ಸ್ವಾಮೀಜಿ ಆಗ್ರಹಿಸಿದ್ದಾರೆ.
ಇಬ್ಬರು ಮಹಿಳೆಯರ ನಡುವಿನ 10 ನಿಮಿಷದಷ್ಟಿರುವ ದೂರವಾಣಿ ಸಂಭಾಷಣೆ ಬಹಿರಂಗ ಆಗಿತ್ತು.
ಈ ಸಂಭಾಷಣೆಯಲ್ಲಿ ಸ್ವಾಮೀಜಿಯವರು ಯುವತಿಯೊಂದಿಗೆ ಸಂಬಂಧ ಹೊಂದಿದ್ದರು, ಆಕೆ ಸ್ವಾಮೀಜಿಯಿಂದ ಬಸುರಿ ಆಗಿದ್ದಳು ಮತ್ತು ಆಕೆಯನ್ನು ಮಠದ ಉಪನ್ಯಾಸಕರೊಬ್ಬರಿಗೆ 40 ಲಕ್ಷ ರೂಪಾಯಿ ಕೊಟ್ಟು ಮದುವೆ ಮಾಡಲಾಗಿತ್ತು ಎಂದು ಆ ಮಹಿಳೆಯರು ಮಾತಾಡಿಕೊಂಡಿದ್ದರು.
ADVERTISEMENT
ADVERTISEMENT