ಸ್ವೀಪರ್ ಪುತ್ರ ಸಿವಿಲ್ಸ್ ಟಾಪರ್ ಆಗಿದ್ದಾರೆ. ತೆಲಂಗಾಣ ರಾಜ್ಯದ ಭೋಪಾಲಪಲ್ಲಿ ಜಿಲ್ಲೆಯ ಕಾಶೀಮ್ ಪಲ್ಲಿಯ 29ವರ್ಷದ ಅಕನೂರಿ ನರೇಶ್ UPSC ಸಿವಿಲ್ಸ್ ಅಂತಿಮ ಪರೀಕ್ಷೆಯಲ್ಲಿ 117ನೇ ಸ್ಥಾನ ಪಡೆದು ಸಂಭ್ರಮಕ್ಕೆ ಕಾರಣರಾಗಿದ್ದಾರೆ.
ನರೇಶ್ ತಂದೆ ಐಲಯ್ಯ ಕೂಲಿ ಕೆಲಸ ಮಾಡಿದರೇ, ತಾಯಿ ಸುಲೋಚನಾ ಸಿಂಗರೇಣಿಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪುತ್ರ IAS ಆಗುತ್ತಿರುವುದನ್ನು ಕಂಡು ತಂದೆ ತಾಯಿ ಸಂಭ್ರಮಿಸಿದ್ದಾರೆ. ಮಗನಿಗೆ ಸಿಹಿ ತಿನ್ನಿಸಿ ಖುಷಿ ಪಟ್ಟಿದ್ದಾರೆ.
ನರೇಶ್ UPSC ಸಿವಿಲ್ಸ್ ಅಂತಿಮ ಪರೀಕ್ಷೆಯಲ್ಲಿ 117ನೇ ಸ್ಥಾನ ಪಡೆದಿರೋದು ಕಾಶೀಮ್ ಪಲ್ಲಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.