ಖ್ಯಾತ ತಮಿಳು ನಟ ಚಿಯಾನ್ ವಿಕ್ರಮ್(56)ಗೆ ಹೃದಯಾಘಾತವಾಗಿದೆ. ಇವರನ್ನು ಇಂದು ಶುಕ್ರವಾರ ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಏಕಾಏಕಿ ಹೃದಯಾಘಾತವಾಗಿದೆ. ನಟ ವಿಕ್ರಮ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರ ಮಾಹಿತಿ ನೀಡಿದ್ದಾರೆ.
ಇಂದು ಸಾಯಂಕಾಲ 6 ಗಂಟೆಗೆ ಚೆನ್ನೈನಲ್ಲಿ ಇವರ ನಟನೆಯ ಪೊನ್ನಿಯನ್ ಸೆಲ್ವನ್ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕಾಗಿ ಸಿದ್ಧತೆ ನಡೆಸಿಕೊಳ್ಳುವಾಗ ಈ ಅವಘಡ ನಡೆದಿದೆ.
ವಿಕ್ರಮ್ ನಟನೆಯ ಬಹುನಿರೀಕ್ಷಿತ ಚಿತ್ರಗಳಾದ ಪೊನ್ನಿಯನ್ ಸೆಲ್ವನ್ ಹಾಗೂ ಕೋಬ್ರಾ ಚಿತ್ರಗಳು ಈ ವರ್ಷ ಬಿಡುಗಡೆಯಾಗಲಿವೆ.