ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಾಲಲಿತಾ ಆಪ್ತೆ ಶಶಿಕಲಾ (Shashikala) ವಿರುದ್ಧ ತನಿಖೆ ನಡೆಸಲು ಸಿಎಂ ಸ್ಟಾಲಿನ್ ಆದೇಶ ಹೊರಡಿಸಿದ್ಧಾರೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಜಯಲಲಿತಾ ಸಾವಿನ ಕುರಿತು ತನಿಖೆ ನಡೆಸಲು ರಚಿಸಲಾಗಿದ್ದ ಆರ್ಮುಗಂ ಸ್ವಾಮಿ ಆಯೋಗ ಸಲ್ಲಿಸಿದ್ದ ವರದಿಯಂತೆ ಶಶಿಕಲಾ ಮತ್ತು ಇತರರ ವಿರುದ್ಧ ತನಿಖೆ ನಡೆಸಲು ಅನುಮೋದನೆ ನೀಡಲಾಗಿದೆ.
ಇನ್ನು ಆರ್ಮುಗಂ ಸ್ವಾಮಿ ವರದಿಯಲ್ಲಿ ಶಶಿಕಲಾ(Shashikala) , ಶಿವಕುಮಾರ್, ಮಾಜಿ ಆರೋಗ್ಯ ಸಚಿವ ಸಿ. ವಿಜಯ ಭಾಸ್ಕರ್, ಮಾಜಿ ಮುಖ್ಯ ಕಾರ್ಯದರ್ಶಿ ಡಾ. ಮೋಹನ್ ರಾವ್ ಮತ್ತು ಇತರರ ವಿರುದ್ಧ ತನಿಖೆ ನಡೆಸುವಂತೆ ಶಿಫಾರಸು ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಜಯಲಲಿತಾ ಆಪ್ತೆ ಶಶಿಕಲಾ ಜೈಲಿನಿಂದ ಬಿಡುಗಡೆ
ಜಯಲಲಿತಾ ಅನಾರೋಗ್ಯದಿಂದ 2016ರ ಡಿಸೆಂಬರ್ 5 ರಂದು ಚೆನ್ನೈ ನ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಶಶಿಕಲಾ 4 ವರ್ಷ ಜೈಲುವಾಸ ಅನುಭವಿಸಿ ಬಿಡುಗಡೆಯಾಗಿದ್ದು, ಸಕ್ರಿಯ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರು. ಈಗ ಜಯಲಲಿತಾ ನಿಧನದ ಕೇಸ್ ನಲ್ಲಿ ತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ಶಶಿಕಲಾ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.