ತಮಿಳುನಾಡಿನಲ್ಲಿ ಹಿಂದಿ ಭಾಷೆಯನ್ನು ಹೇರಲು ಬಿಡಲ್ಲ, ಬದಲಿಗೆ ತಮಿಳುನಾಡು ದೇಶದಲ್ಲಿ ಸಂಪರ್ಕ ಭಾಷೆ ಆಗಲಿ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಹೇಳಿದ್ದಾರೆ.
ಈ ಮೂಲಕ `ಇಂಗ್ಲೀಷ್ಗೆ ಹಿಂದಿ ಪರ್ಯಾಯ ಭಾಷೆ ಮತ್ತು ಹಿಂದಿಯೇ ದೇಶದಲ್ಲಿ ಸಂಪರ್ಕ ಭಾಷೆ ಆಗಬೇಕು’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
`ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ತಮಿಳುನಾಡು ಬಿಜೆಪಿ ಬಿಡಲ್ಲ. ದೇಶದಲ್ಲಿ ತಮಿಳು ಸಂಪರ್ಕ ಭಾಷೆಯಾದರೆ ಬಿಜೆಪಿ ಸಂತೋಷ ಪಡುತ್ತದೆ. ಒಂದು ವೇಳೆ ನಾವು ಅದನ್ನು ಬಯಸುವುದಾದರೆ, ಇತರೆ ರಾಜ್ಯಗಳಿಗೆ ತಮಿಳುನಾಡು ಸರ್ಕಾರ ಪತ್ರ ಬರೆದು ಅಲ್ಲಿ ರಾಜ್ಯಗಳಲ್ಲಿ 10 ತಮಿಳು ಶಾಲೆ ತೆರೆಯುವಂತೆ ಹೇಳಬೇಕು. ಒಂದು ವೇಳೆ ಅದಾದರೆ ಬಿಜೆಪಿ ಅದನ್ನು ಸ್ವಾಗತಿಸುತ್ತದೆ’
ಎಂದು ಅಣ್ಣಾಮಲೈ ಹೇಳಿದ್ದಾರೆ.