ಖಾದ್ಯ ತೈಲ ಸಾಗಣೆ ಮಾಡುತ್ತಿದ್ದ ಟ್ಯಾಂಕರ್ ಮಹಾರಾಷ್ಟ್ರದ ಮುಂಬೈ-ಅಹ್ಮದಾಬಾದ್ ಹೆದ್ದಾರಿಯಲ್ಲಿ ಟ್ಯಾಂಕರ್ ಪಲ್ಟಿ ಹೊಡೆದಿದ್ದು, ರಸ್ತೆಯಲ್ಲಿ ಬಿದ್ದಿದ್ದ ಟ್ಯಾಂಕರ್ ನಿಂದ ಖಾದ್ಯ ತೈಲವನ್ನು ಸ್ಥಳೀಯರು ಲೂಟಿ ಮಾಡಿದ್ದಾರೆ.
ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದರ ಪರಿಣಾಮ ಮೂರು ಗಂಟೆಗಳ ಕಾಲ ವಾಹನ ದಟ್ಟಣೆ ಉಂಟಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಈ ಘಟನೆ ನಡೆಯುತ್ತಿದ್ದಂತೆಯೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಸೋರುತ್ತಿದ್ದ ಖಾದ್ಯ ತೈಲವನ್ನು ತುಂಬಿಸಿಕೊಂಡು ಹೋಗಿದ್ದಾರೆ.
ಟ್ಯಾಂಕರ್ ನಲ್ಲಿ 12,000 ಲೀಟರ್ ಗಳಷ್ಟು ಖಾದ್ಯ ತೈಲವಿತ್ತು. ಗುಜರಾತ್ ನ ಸೂರತ್ ನಿಂದ ಮುಂಬೈ ಗೆ ಇದನ್ನು ಸಾಗಿಸಲಾಗುತ್ತಿದ್ದಾಗ ತಾವಾ ಗ್ರಾಮದ ಬಳಿ ನಿಯಂತ್ರಣ ತಪ್ಪಿ, ಪಲ್ಟಿ ಹೊಡೆದಿದೆ. ಈ ವೇಳೆ ಗ್ರಾಮದ ಹಲವರು ಕ್ಯಾನ್ ತಂದು ಖಾದ್ಯ ತೈಲವನ್ನು ತುಂಬಿಸಿಕೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.