Tapsee Mishan Impossible Trailer Released By Mahesh Babu:
ಬಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿರುವ ತಾಪ್ಸಿ ಪನ್ನು ಮತ್ತೊಮ್ಮೆ ತೆಲುಗು ಸಿನೆಮಾದಲ್ಲಿ ನಟಿಸಿದ್ದಾರೆ. ಹೆಸರು ಮಿಷನ್ ಇಂಪಾಸಿಬಲ್.. ಇದರಲ್ಲಿ ನಮ್ಮ ಕನ್ನಡದ ನಟ ರಿಷಬ್ ಶೆಟ್ಟಿ ಕೂಡಾ ನಟಿಸಿದ್ದಾರೆ.
ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರೋದು ಏಜೆಂಟ್ ಸಾಯಿ ಶ್ರೀನಿವಾಸ ಆತ್ರೆಯ ಫೇಮ್ RSJ. ಏಪ್ರಿಲ್ ಒಂದರಂದು ರಿಲೀಸ್ ಆಗ್ತಿರುವ ಈ ಚಿತ್ರದ ಟ್ರೈಲರ್ ಅನ್ನು ಸೂಪರ್ ಸ್ಟಾರ್ ಮಹೇಶ್ ಬಾಬು ರಿಲೀಸ್ ಮಾಡಿದ್ದಾರೆ.
ತೀವ್ರ ಕುತೂಹಲ ಮೂಡಿಸಿರುವ ಈ ಟ್ರೈಲರ್ ನಲ್ಲಿ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ ಪಾತ್ರದಲ್ಲಿ ತಾಪ್ಸಿ ಕಾಣಿಸಿಕೊಂಡಿದ್ದಾರೆ.
ಮಾಫಿಯಾ ಡಾನ್ ದಾವುದ್ ಇಬ್ರಾಹಿಂ ಹಿಡಿಯುವ ಸಲುವಾಗಿ ಮೂವರು ಹುಡುಗರು ಏನು ಮಾಡಿದರು ಎಂಬುದು ಇಲ್ಲಿ ಇಂಟ್ರೆಸ್ಟಿಂಗ್.. ಈ ಕ್ಯಾರೆಕ್ಟರ್ ಹೆಸರು ರಘುಪತಿ -ರಾಘವ- ರಾಜರಾಮ್ ಅಂದರೆ RRR..
ಕನ್ನಡದ ರಿಷಬ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ರಿಷಬ್ ಜೊತಗೆ ಇನ್ನೆರಡು ಕ್ಯಾರೆಕ್ಟರ್ ಕೂಡಾ ಇವೆ.. ಅವರ ಹೆಸರು ಖಲೀಲ್, ಜಿಲಾನಿ, ಫಾರುಕ್ ಅಂದರೆ KGF.. ಆದ್ರೆ ಪಾರ್ಟ್ ಒನ್ನಾ, ಟೂನಾ ಗೊತ್ತಾಗಲ್ಲ!
ಟ್ರೈಲರ್ ನ ಡೈಲಾಗ್ ಕೇಳಿದರೇನೇ ನಗು ಕಿತ್ತುಕೊಂಡು ಬರುತ್ತೆ.. ಇನ್ನು ಸಿನೆಮಾ ನೋಡಿದರೇ ಹೆಂಗೋ..