ತೈಲ ಬೆಲೆ, ಅಗತ್ಯ ವಸ್ತುಗಳ ಬೆಲೆ ಗಗನಮುಖಿ ಆಗಿ, ಜೀವನ ಕಡುಕಷ್ಟವಾಗಿರುವ ಸಂದರ್ಭದಲ್ಲೇ ರಾಜ್ಯ ಸರ್ಕಾರ ಗ್ರಾಮೀಣ ಜನತೆಗೆ ತೆರಿಗೆ ಹೆಚ್ಚಿಸಿ ಬಿಗ್ ಶಾಕ್ ನೀಡಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಸ್ಥಿರಾಸ್ತಿಯ ಮಾರ್ಗಸೂಚಿ ದರದ ಆಧಾರದ ಮೇಲೆ ವಸತಿ, ಕೈಗಾರಿಕಾ ಉದ್ದೇಶದ ಆಸ್ತಿಗಳಿಗೆ ತೆರಿಗೆ ನಿಗದಿ ಮಾಡುವುದಕ್ಕೆ ಅವಕಾಶ ಕಲ್ಪಿಸುವ ಹೊಸ ನಿಯಮಗಳ ಜಾರಿಗೆ ಪಂಚಾಯತ್ ರಾಜ್ ಇಲಾಖೆ ಅಧಿಸೂಚನೆ ಹೊರಡಿಸಿದೆ.
ಎಲ್ಲಾ ಗ್ರಾಮ ಪಂಚಾಯತ್ ಗಳು ಆಯಾ ಪ್ರದೇಶದ ಸ್ಥಿರಾಸ್ತಿ ಮಾರ್ಗಸೂಚಿ ದರದ ಆಧಾರದಲ್ಲೇ ತೆರಿಗೆ ವಿಧಿಸಲಿವೆ. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ತೆರಿಗೆ ಭಾರ ಹೆಚ್ಚಲಿದೆ.
ನೀರಿನ ಕರ ಕೂಡಾ ಹೆಚ್ಚಳ
# ನಲ್ಲಿ ಸಂಪರ್ಕ ಪಡೆಯಲು 2000 ರೂ. ಶುಲ್ಕ
# 10ಕಿಲೋ ಲೀಟರ್ ವರೆಗಿನ ನೀರು ಬಳಕೆಗೆ ಇನ್ಮುಂದೆ ಕನಿಷ್ಠ 80 ರೂ. ಬಿಲ್
# ಕುಕ್ಕುಟೋದ್ಯಮ, ಕೃಷಿ ಸಂಬಂಧಿಸಿದ ಉದ್ದಿಮೆಗಳಿಗೂ ತೆರಿಗೆ
# ಸಣ್ಣ ಕೈಗಾರಿಕೆಗಳಿಗೆ ಕಟ್ಟಡ ಮೌಲ್ಯದ ಶೇಕಡಾ 0.40ರಷ್ಟು ತೆರಿಗೆ
# ಮಧ್ಯಮ ಕೈಗಾರಿಕೆಗಳಿಗೆ ಕಟ್ಟಡ ಮೌಲ್ಯದ ಶೇಕಡಾ 0.50ರಷ್ಟು ತೆರಿಗೆ
# ಬೃಹತ್ ಕೈಗಾರಿಕೆಗಳಿಗೆ ಕಟ್ಟಡ ಮೌಲ್ಯದ ಶೇಕಡಾ 0.60ರಷ್ಟು ತೆರಿಗೆ