ಜಿಂಬಾಬ್ವೆ ತಂಡದ ವಿರುದ್ಧ ನಡೆಯಲಿರುವ 3 ಏಕದಿನ ಸರಣಿಗೆ ಭಾರತ ತಂಡದ ಆಟಗಾರರನ್ನು ಬಿಸಿಸಿಐ ಪ್ರಕಟ ಮಾಡಿದೆ.
ಜಿಂಬಾಬ್ವೆ ತಂಡದ ವಿರುದ್ಧದ 3 ಪಂದ್ಯಗಳಿಗೆ ಶೀಖರ್ ಧವನ್ ನಾಯ್ಕತ್ವ ವಹಿಸಿಕೊಳ್ಳಲಿದ್ದಾರೆ. ಈ ಸರಣಿಗೆ ಕಳೆದ 4 ರಿಂದ 5 ತಿಂಗಳುಗಳಿಂದ ಗಾಯದ ಸಮಸ್ಯೆಯಿಂದ ವಿಶ್ರಾಂತಿಯಲ್ಲಿದ್ದ ದೀಪಕ ಚಹಾರ್ಗೆ ಅವಕಾಶ ದೊರೆತಿದೆ. ಜಿಂಬಾಬ್ವೆ ವಿರುದ್ಧದ ಸರಣಿಗೆ ಹಲವು ಹಿರಿಯ ಆಟಗಾರರಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ.
ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ಒಂದು ಯುವ ತಂಡವನ್ನೇ ಬಿಸಿಸಿಐ ಆಯ್ಕೆ ಮಾಡಿದೆ. ಮೊದಲ ಹಂತದ ಎಲ್ಲಾ ಆಟಗಾರರಿಗೆ ವಿಶ್ರಾಂತಿ ನೀಡಿರುವ ಬಿಸಿಸಿಐ 2 ನೇ ಹಾಗೂ 3 ನೇ ಹಂತದ ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಿದೆ.
ಜಿಂಬಾಬ್ವೆ ವಿರುದ್ಧದ ತಂಡಕ್ಕೆ ಮರಳಲಿದ್ದಾರೆ ಎನ್ನಲಾಗಿದ್ದ ವಿರಾಟ್ ಕೊಹ್ಲಿ, ನಾಯಕ ರೋಹಿತ್ ಶರ್ಮಾ, ಹಾರ್ಧಿಕ ಪಾಂಡ್ಯಾ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಜಸ್ಪ್ರಿತ್ ಬುಮ್ರಾ, ರವೀಂದ್ರ ಜಡೇಜಾ, ಮಹಮ್ಮದ್ ಶಮಿ ಮತ್ತು ಯಜುವೇಂದ್ರ ಚಾಹಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಇದನ್ನೂ ಓದಿ : ಭಾರತಕ್ಕೆ ಮೊದಲ ಚಿನ್ನ – ಕಾಮನ್ವೆಲ್ತ್ನಲ್ಲಿ ಒಂದೇ ದಿನ ಮೂರು ಪದಕ – Pratikshana News
ಗಾಯದ ಸಮಸ್ಯೆಯಿಂದ ಗುಣಮುಖರಾಗಿರುವ ವಾಷಿಂಗ್ಟನ್ ಸುಂದರ್, ರಾಹುಲ್ ತ್ರಿಪಾಠಿ, ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್ ಸೇರಿದಂತೆ ಹಲವು ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ.
ಮುಂದಿನ ಏಕದಿನ ವಿಶ್ವಕಪ್ ಮತ್ತು ಏಷ್ಯಾ ಟಿ-20 ವಿಶ್ವಕಪ್ಗೆ ಸದೃಢ ಹಾಗೂ ಯುವ ಆಟಗಾರರ ತಂಡ ಕಟ್ಟುವ ಸಲುವಾಗಿ ಬಿಸಿಸಿಐ ಈ ಪ್ರಯೋಗ ಮಾಡಿದೆ ಎಂದು ಅಂದಾಜಿಸಲಾಗಿದೆ.
ಜಿಂಬಾಬ್ವೆ ವಿರುದ್ದ ಇದೇ ಅಗಸ್ಟ್ 18,20 ಮತ್ತು 22 ರಂದು ಭಾರತ ತಂಡ 3 ಏಕದಿನ ಪಂದ್ಯಗಳನ್ನು ಆಡಲಿದೆ.
ಭಾರತ ತಂಡ ಇಂತಿದೆ :
ಶಿಖರ್ ಧವನ್ (ನಾಯಕ), ರುತುರಾಜ್ ಗಾಯಕ್ವಾಡ್, ಶುಭ್ಮನ್ ಗಿಲ್, ದೀಪಕ್ ಹುಡಾ, ರಾಹುಲ್ ತ್ರಿಪಾಠಿ, ಇಶಾನ್ ಕಿಶಾನ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶಾನ್ (ವಿಕೆಟ್ ಕೀಪರ್),ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಆವೇಶ ಖಾನ್, ಪ್ರಸಿದ್ಧ್ ಕ್ರಿಷ್ಣ, ಮಹಮ್ಮದ್ ಸಿರಾಜ್, ದೀಪಕ್ ಚಾಹರ್.