16 ವರ್ಷದ ಚೆಸ್ ಆಟಗಾರ ಆರ್ ಪ್ರಗ್ನಾನಂದ ಅವರು ಈ ವರ್ಷ ಎರಡನೇ ಬಾರಿಗೆ ವಿಶ್ವಚಾಂಪಿಯನ್ ಮ್ಯಾಗ್ನಸ್ ಕಾರ್ಲ್ಸನ್ ಅವರನ್ನು ಸೋಲಿಸಿದ್ದಾರೆ. ಚೆಸ್ಬಲ್ ಮಾಸ್ಟರ್ಸ್ನ ನಡೆಯುತ್ತಿರುವ ಐದನೇ ಸುತ್ತಿನಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್ ಸನ್ ಅವರನ್ನು ಹಿಂದಿಕ್ಕಿದ್ದಾರೆ. ಈ ವರ್ಷದ ಆರಂಭದಲ್ಲಿ, ಪ್ರಗ್ನಾನಂದ ಅವರು ಕಾರ್ಲ್ಸನ್ರನ್ನು ಸೋಲಿಸಿದರು ಮತ್ತು ಈಗ ಮೂರು ತಿಂಗಳ ಅವಧಿಯಲ್ಲಿ ಮತ್ತೊಮ್ಮೆ ನಾರ್ವೇಜಿಯನ್ ಆಟಗಾರನನ್ನು ಸೋಲಿಸಿದರು.
ಇದಕ್ಕೂ ಮೊದಲು, ಪ್ರಗ್ನಾನಂದ ಅವರು ಈ ವರ್ಷದ ಫೆಬ್ರವರಿಯಲ್ಲಿ ಏರ್ಥಿಂಗ್ಸ್ ಮಾಸ್ಟರ್ಸ್ನಲ್ಲಿ ನಾರ್ವೆಯ ಆಟಗಾರ ಕಾರ್ಲ್ಸನ್ ಅವರನ್ನು ಸೋಲಿಸಿದ್ದರು. ಜನವರಿ 2022ರಲ್ಲಿ ನಡೆದ ಟಾಟಾ ಸ್ಟೀಲ್ ಚೆಸ್ ಟೂರ್ನಮೆಂಟ್ 2022 ರ ಮಾಸ್ಟರ್ಸ್ ವಿಭಾಗದಲ್ಲಿ ಪ್ರಗ್ನಾನಂದ ಅವರು ಆಂಡ್ರೆ ಎಸಿಪೆಂಕೊ, ವಿದಿತ್ ಗುಜರಾತಿ ಮತ್ತು ನಿಲ್ಸ್ ಗ್ರ್ಯಾಂಡ್ಲಿಯಸ್ವಿರುದ್ಧ ಪಂದ್ಯಗಳನ್ನು ಗೆದ್ದು ಅಂತಿಮ ಸ್ಕೋರ್ 5.5 ಅಂಕಗಳೊಂದಿಗೆ ವಿಶ್ವಮಟ್ಟದಲ್ಲಿ 12ನೇ ಸ್ಥಾನ ಪಡೆದಿದ್ದರು.
Magnus Carlsen blunders and Praggnanandhaa beats the World Champion again! https://t.co/J2cgFmhKbT #ChessChamps #ChessableMasters pic.twitter.com/mnvL1BbdVn
— chess24 (@chess24com) May 20, 2022
ತಮಿಳುನಾಡಿನ ಚೆಸ್ ಪ್ರತಿಭೆ ಪ್ರಗ್ನಾನಂದ ಅವರು 2018 ರಲ್ಲಿ ಅಸ್ಕರ್ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರು ಗ್ರ್ಯಾಂಡ್ ಮಾಸ್ಟರ್ ಪಟ್ಟವನ್ನು ಸಾಧಿಸಿದ ವಿಶ್ವದ ಎರಡನೇ ಕಿರಿಯ ವ್ಯಕ್ತಿಯಾಗಿದ್ದಾರೆ.
ಪ್ರಗ್ನಾನಂದ 2013 ರಲ್ಲಿ ವಿಶ್ವ ಯೂತ್ ಚೆಸ್ ಚಾಂಪಿಯನ್ಶಿಪ್ U-8 ಪ್ರಶಸ್ತಿಯನ್ನು ಗೆದ್ದಿದ್ದರು. ಇದು ಅವರಿಗೆ 7 ನೇ ವಯಸ್ಸಿನಲ್ಲಿ FIDE ಮಾಸ್ಟರ್ ಪ್ರಶಸ್ತಿಯನ್ನು ತಂದುಕೊಟ್ಟಿತ್ತು.