ಮೋದಿಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಲಿ ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಸವಾಲು ಹಾಕುವ ಮೂಲಕ ಮೋದಿ ವಿರುದ್ಧದ ವಾಗ್ಬಾಣವನ್ನು ಮೊನಚುಗೊಳಿಸಿದ್ದಾರೆ. ತೆಲಂಗಾಣದ ರೈತರ ಭತ್ತವನ್ನು ಕೇಂದ್ರ ಸರ್ಕಾರ ಖರೀದಿಸುವಂತೆ ಆಗ್ರಹಿಸಿ ರಾಷ್ಟç ರಾಜಧಾನಿ ದೆಹಲಿಯಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಧರಣಿಯಲ್ಲಿ ಭಾಗವಹಿಸಿ ಕೆಸಿಆರ್ ಈ ಸವಾಲು ಹಾಕಿದ್ದಾರೆ.
`ಒಂದು ವೇಳೆ ಮೋದಿಗೆ ತಾಕತ್ತಿದ್ದರೆ ನನ್ನನ್ನು ಬಂಧಿಸಲಿ. ಪ್ರಧಾನಿಗೆ ಮತ್ತು ಪಿಯೂಷ್ ಗೋಯಲ್ಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ, ನಮ್ಮ ರೈತರ ಭತ್ತ ಖರೀದಿಸಿ. ನಾನು ನಿಮಗೆ 24 ಗಂಟೆ ಸಮಯ ನೀಡುತ್ತೇನೆ, ಆ ಬಳಿಕ ನಾವು ನಮ್ಮ ನಿರ್ಧಾರ ಕೈಗೊಳ್ಳುತ್ತೇವೆ.
ತೆಲಂಗಾಣ ಅದರ ಹಕ್ಕನ್ನು ಕೇಳುತ್ತಿದೆ. ಹೊಸ ಕೃಷಿ ನೀತಿಯನ್ನು ಮಾಡಿ ಮತ್ತು ನಾವೂ ಬೆಂಬಲವನ್ನು ನೀಡುತ್ತೇವೆ. ಒಂದು ವೇಳೆ ನೀವು ಮಾಡಿಲ್ಲವಾದರೆ ನಿಮ್ಮನ್ನು ಕಿತ್ತೊಗೆದು ಹೊಸ ಸರ್ಕಾರ ಸಮಗ್ರ ಕೃಷಿ ನೀತಿಯನ್ನು ಮಾಡುತ್ತದೆ. ಸರ್ಕಾರವನ್ನೇ ಉರುಳಿಸುವ ತಾಕತ್ತಿರುವ ರೈತರ ಜೊತೆಗೆ ಆಟ ಆಡ್ಬೇಡಿ, ರೈತರು ಭಿಕ್ಷÄಕರಲ್ಲ’
ಎಂದು ಸಿಎಂ ಕೆಸಿಆರ್ ಪ್ರಧಾನಿ ಮೋದಿಗೆ ಎಚ್ಚರಿಸಿದ್ದಾರೆ.
15 ಲಕ್ಷ ಟನ್ ಭತ್ತ ಖರೀದಿ ಮಾಡುವಂತೆ ಇದೇ ಮೊದಲ ಬಾರಿಗೆ ತೆಲಂಗಾಣ ರಾಷ್ಟç ಸಮಿತಿ ರಾಷ್ಟç ರಾಜಧಾನಿಯಲ್ಲಿ ಪ್ರತಿಭಟನೆ ನಡೆಸುತ್ತಿದೆ.