ಭಾರತಿ ಏರ್ಟೆಲ್, ರಿಲಯನ್ಸ್ ಜಿಯೋ ಮತ್ತು ವೋಡಾಫೋನ್ ಐಡಿಯಾ ತಮ್ಮ ಮೊಬೈಲ್ ಸೇವೆಯ ದರವನ್ನು ಏರಿಕೆ ಮಾಡುವ ಸಾಧ್ಯತೆ ಇದೆ. ಈ ಆರ್ಥಿಕ ವರ್ಷದ ದ್ವಿತೀಯಾರ್ಧದಲ್ಲಿ ಡಾಟಾ ಒಳಗೊಂಡAತೆ ಟೆಲಿಕಾಂ ಸೇವೆಗಳು ದುಬಾರಿ ಆಗಬಹುದು.
ಟಾರಿಫ್ ಹೆಚ್ಚಳದಿಂದ 2023ರ ಆರ್ಥಿಕ ವರ್ಷದಲ್ಲಿ ಟೆಲಿಕಾಂ ಕಂಪನಿಗಳ ಆದಾಯ ಶೇಕಡಾ 20ರಿಂದ 25ರಷ್ಟು ಹೆಚ್ಚಳ ಆಗಬಹುದು.
ಆಗಸ್ಟ್ 2021ರಿಂದ ಫೆಬ್ರವರಿ 2022ರವರೆಗೆ ರಿಲಯನ್ಸ್ ಜಿಯೋ ಬಳಕೆದಾರರ ಸಂಖ್ಯೆ ಇಳಿಕೆ ಆಗಿದೆ. ಆದರೆ ಸಕ್ರಿಯ ಬಳಕೆದಾರರ ಪ್ರಮಾಣ ಶೇಕಡಾ 78ರಿಂದ ಶೇಕಡಾ 94ಕ್ಕೆ ಹೆಚ್ಚಳ ಆಗಿದೆ. ಇದೇ ಅವಧಿಯಲ್ಲಿ ಏರ್ಟೆಲ್ಗೆ 1.10 ಕೋಟಿ ಹೊಸ ಸಬ್ ಸ್ಕೆçöÊಬರ್ಸ್ ಬಂದಿದ್ದಾರೆ. ಏರ್ಟೆಲ್ ಸಕ್ರಿಯ ಬಳಕೆದಾರರ ಪ್ರಮಾಣ ಶೇಕಡಾ 99ರಷ್ಟಿದೆ. ವೋಡಾಫೋನ್ ಐಡಿಯಾ ಕಳಪೆ ಸೇವೆ ಹಿನ್ನೆಲೆಯಲ್ಲಿ 3 ಕೋಟಿ ಬಳಕೆದಾರರನ್ನು ಕಳೆದುಕೊಂಡಿದೆ.