ಮೊಬೈಲ್ ಉತ್ಪಾದನೆಗೆ ಬಳಸಲಾಗುವ ಬಿಡಿಭಾಗಗಳ ಮೇಲಿನ ಆಮದು ಸುಂಕವನ್ನು ಕೇಂದ್ರ ಸರ್ಕಾರ ಶೇಕಡಾ 5ರಷ್ಟು ಕಡಿತ ಮಾಡಿದೆ. ಆಮದು ಸುಂಕವನ್ನು ಈಗಿರುವ ಶೇಕಡಾ 15ರಿಂದ ಶೇಕಡಾ 10ಕ್ಕೆ ಇಳಿಸಿ ಹಣಕಾಸು ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಮೊಬೈಲ್ ಉತ್ಪಾದನೆಗೆ ಬಳಸಲಾಗುವ ಹಿಂದಿನ ಕವರ್ (back covers), ಬ್ಯಾಟರಿ, ಜಿಎಸ್ಎಂ ಆ್ಯಂಟೆನಾ, ಮುಖ್ಯ ಕ್ಯಾಮರಾ ಲೆನ್ಸ್ ಮತ್ತು ಇತರೆ ಪ್ಲಾಸಿಕ್ ಮತ್ತು ಲೋಹದ ಬಿಡಿಭಾಗಗಳ ಮೇಲಿನ ಸುಂಕವನ್ನು ಶೇಕಡಾ 5ರಷ್ಟು ಇಳಿಸಲಾಗಿದೆ.
ನಾಳೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಮಂಡಿಸುವ ಬಜೆಟ್ಗೂ ಹಿಂದಿನ ದಿನ ಕೇಂದ್ರ ಸರ್ಕಾರ ಸುಂಕ ಕಡಿತಗೊಳಿಸಿದೆ.
ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಭಾರತದಲ್ಲೇ ಮೊಬೈಲ್ ಉತ್ಪಾದನೆಗೆ ವಿಶ್ವದ ದೊಡ್ಡ ಕಂಪನಿಗಳಿಗೆ ಅನುಕೂಲವಾಗಲಿದೆ ಮತ್ತು ಭಾರತದಿಂದ ಮೊಬೈಲ್ ರಫ್ತು ಹೆಚ್ಚಳ ಆಗಲಿದೆ ಎಂದು ಭಾವಿಸಲಾಗಿದೆ.