ಅಂತರಾಷ್ಟ್ರೀಯ ಕ್ರಿಕೆಟಿಗರನ್ನು ಹೊತ್ತಿದ್ದ ಇಂಡಿಗೋ ವಿಮಾನದ ಇಂಜಿನ್ ಫೇಲ್ ಆಗಿದ್ದರಿಂದ ಕಾನ್ಪುರದಲ್ಲಿ ಟೇಕ್ ಆಫ್ ಆಗಬೇಕಿದ್ದ ವಿಮಾನ ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ.
ಇಂದು ಶುಕ್ರವಾರ ಕಾನ್ಪುರದಿಂದ ಇಂದೋರ್ಗೆ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ತಂಡಗಳ ಸದಸ್ಯರನ್ನು ಕರೆದೊಯ್ಯಬೇಕಿತ್ತು. ರಸ್ತೆ ಮಾರ್ಗ ಅಷ್ಟೊಂದು ಸುರಕ್ಷವಲ್ಲದ್ದರಿಂದ ವಿಮಾನದ ಮೂಲಕ ಪ್ರಯಾಣಿಸಲು ಸಿದ್ಧತೆ ನಡೆದಿತ್ತು.
ಇಂಡಿಗೋ ವಿಮಾನದ ಮೂಲಕ ಕ್ರಿಕೆಟಿಗರನ್ನು ಕಾನ್ಪುರದಿಂದ ಇಂದೋರ್ಗೆ ಕಳುಹಿಸಬೇಕಿತ್ತು. ಇನ್ನೇನು ಕ್ರಿಕೆಟಿಗರನ್ನು ಹೊತ್ತಿದ್ದ ವಿಮಾನ ಟೇಕ್ ಆಫ್ ಆಗಬೇಕು ಎನ್ನುವಷ್ಟರಲ್ಲಿ ಇಂಜಿನ್ ಫೇಲ್ ಆಗಿದೆ.
ಇಂಜಿನ್ ವೈಪಲ್ಯಕ್ಕೆ ಕಾರಣವಾದ ತಾಂತ್ರಿಕ ವೈಪಲ್ಯದ ಬಗ್ಗೆ ಪರಿಶೀಲಿಸಲಾಗುತ್ತಿದೆ. ಆಟಗಾರರಿಗೆ ಮತ್ತೊಂದು ವಿಮಾನದ ವ್ಯವಸ್ಥೆ ಮಾಡಲಾಗುತ್ತಿದೆ.
ರಸ್ತೆ ಮಾರ್ಗದಲ್ಲಿ ಕಾನ್ಪುರ್, ಇಂದೋರ್, ಡೆಹ್ರಾಡೂನ್ ಮತ್ತು ರಾಯ್ಪುರ ನಗರದಗಳನ್ನು ದಾಟಿ ಪ್ರಯಾಣಿಸಬೇಕಿದ್ದರಿಂದ ಸುರಕ್ಷತೆ ಸಮಸ್ಯೆಯುಂಟಾಗಿತ್ತು. ಇದನ್ನೂ ಓದಿ : ಅಂತರಾಷ್ಟ್ರೀಯ ಕ್ರಿಕೆಟ್ಗೆ ಕನ್ನಡಿಗ ರಾಬಿನ್ ಉತ್ತಪ್ಪ ನಿವೃತ್ತಿ